Header Ads
Header Ads
Breaking News

ರಸ್ತೆ ಬದಿಯಲ್ಲಿ ಮೀನು ಮಾರಾಟ ಕಟ್ಟಡ ಮಾಲಕರ ಹಾಗೂ ವ್ಯಾಪಾರಿಗಳ ವ್ಯಾಪಕ ವಿರೋಧ ಕಟ್ಟಡ ಮಾಲಕರು, ಮೀನು ವ್ಯಾಪಾರಿಗಳಿಂದ ಪೊಲೀಸರಿಗೆ ದೂರು

 

ರಾಷ್ಟ್ರೀಯ ಹೆದ್ದಾರಿ ಬದಿಗಳಲ್ಲಿ ಮೀನು ಮಾರಾಟ ವ್ಯಾಪಕವಾಗಿದ್ದು, ಇದು ವ್ಯಾಪಾರಿಗಳನ್ನು ಹಾಗೂ ಕಟ್ಟಡ ಮಾಲಕರನ್ನು ಹಾಗೂ ಸಾರ್ವಜನಿಕರನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿರುವುದಾಗಿ ಕುಂಜತ್ತೂರು ಮಾಡ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಮೀನು ಮಾರಾಟ ನಡೆಸುತ್ತಿರುವ ಮೀನು ವ್ಯಾಪಾರಿಗಳ ವಿರುದ್ದ ಸಮೀಪದ ಕಟ್ಟಡ ಮಾಲಕರು, ವ್ಯಾಪಾರಿಗಳು, ವೈದ್ಯರು ಸೇರಿದಂತೆ ಹಲವರು ಸೇರಿ ಜಿಲ್ಲಾಧಿಕಾರಿ, ಸ್ಥಳೀಯಾಡಳಿತ ಹಾಗೂ ಮಂಜೇಶ್ವರ ಪೊಲೀಸರಿಗೆ ದೂರುಗಳನ್ನು ನೀಡಿದ್ದಾರೆ.

ವ್ಯಾಪಾರಿಗಳ ಕಟ್ಟಡಗಳ ಮುಂಬಾಗದಲ್ಲೇ ಮೀನಿನ ಕೊಳಕು ನೀರನ್ನು ಚೆಲ್ಲಿ ಕೊಂಡು ಗ್ರಾಹಕರು ಬರುವುದನ್ನು ತಡೆಗಟ್ಟುವ ರೀತಿಯಲ್ಲಿ ಬೆಳಿಗ್ಗೆ ೮ ಗಂಟೆಗೆ ಪ್ರಾರಂಭಗೊಂಡರೆ ರಾತ್ರಿ ೧೦ ರ ತನಕ ಮೀನು ವ್ಯಾಪಾರ ನಡೆಸಿ ಸಮಸ್ಯೆಗಳನ್ನು ಸೃಷ್ಟಿಸುತ್ತಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸುವಂತೆ ಆಗ್ರಹಿಸಲಾಗಿದೆ. ಮೀನು ಮಾರಾಟಗಾರರಿಗೆ ಮೀನು ಮರಾಟ ನಡೆಸಲು ಮಂಜೇಶ್ವರ ಗ್ರಾ, ಪಂ. ವತಿಯಿಂದ ಬ್ಲೋಕ್ ಪಂ. ಕಚೇರಿ ಮುಂಬಾಗದಲ್ಲಿ ಸುಸಜ್ಜಿತವಾದ ಕಟ್ಟಡವನ್ನು ಕಟ್ಟಿ ಕೊಟ್ಟಿದ್ದರೂ ಅಲ್ಲಿ ಕೇವಲ ಬೆರಳೆಣಿಕೆ ಮಂದಿ ಮಾತ್ರ ಮೀನು ಮಾರಾಟ ನಡೆಸುವುದಲ್ಲದೆ ಉಳಿದ ಎಲ್ಲರೂ ಮಂಜೇಶ್ವರ ರಾಗಂ ಜಂಕ್ಷನ್ ಹೆದ್ದಾರಿ, ಕುಂಜತ್ತೂರು ಹೆದ್ದಾರಿ ಬದಿಗಳಲ್ಲಿ ಬೆಳಿಗ್ಗೆಯಿಂದ ರಾತ್ರಿ ೧೦ ಗಂಟೆ ತನಕ ಕೊಳಕು ನೀರನ್ನು ಸಾರ್ವಜನಿಕ ಸ್ಥಳದಲ್ಲಿಯೇ ಚೆಲ್ಲಿ ಕೊಂಡು ಸಾರ್ವಜನಿಕರಿಗೂ ಅದೇ ರೀತಿ ವ್ಯ್ಪಾರಿಗಳಿಗೂ ಸಮಸ್ಯೆಯನ್ನು ಉಂಟು ಮಾಡುವ ರೀತಿಯಲ್ಲಿ ಮಾರಾಟ ಮಾಡುತ್ತಿರುವುದು ಇದೀಗ ಸಾರ್ವಜನಿಕರ , ವ್ಯಾಪಾರಿಗಳ ಹಾಗೂ ಲಘು ವಾಹನ ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಮಧ್ಯೆ ಮೀನು ವ್ಯಾಪಾರಿಯೊಬ್ಬ ಮಂಜೇಶ್ವರ ಪೊಲೀಸ್ ಠಾಣೆಯಿಂದ ನಮಗೆ ಮೀನು ಮಾರಾಟಕ್ಕೆ ಒಪ್ಪಿಗೆ ಸಿಕ್ಕಿರುವುದಾಗಿ ಹೇಳಿರುವುದು ಇನ್ನೊಂದು ವಿವಾದಕ್ಕೂ ಕಾರಣವಾಗಿದೆ. ಸಂಬಂಧಪಟ್ಟವರು ಕೂಡಲೇ ಇದಕ್ಕೊಂದು ಪರಿಹಾರವನ್ನು ಕಾಣದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಸ್ಥಳೀಯಾಡಳಿತ ಕಚೇರಿ ಮುಂಬಾಗದಲ್ಲಿ ಪ್ರತಿಭಟನಾ ಸತ್ಯಾಗ್ರಹ ನಡೆಸಲಿರುವುದಾಗಿ ವ್ಯಾಪಾರಿಗಳು ಎಚ್ಚರಿಸಿದ್ದಾರೆ.

Related posts

Leave a Reply