Header Ads
Breaking News

ರಸ್ತೆ ಬದಿಯಲ್ಲೇ ಕಸ ಹಾಕುತ್ತಿದ್ದ ಹೊಟೇಲ್ ಮಾಲೀಕ: ಸ್ಥಳೀಯರಿಂದ ಎಚ್ಚರಿಕೆ

 ಕಳೆದ ಕೆಲವು ದಿನದಿಂದ ರಸ್ತೆ ಬದಿಯಲ್ಲಿಯೇ ಕಸ ಹಾಕುತ್ತಿದ್ದ ಹೊಟೇಲ್ ಮಾಲಿಕನೊಬ್ಬನಿಗೆ ಸ್ಥಳೀಯರೇ ಬೆವರಿಳಿಸಿದ ಘಟನೆ ಉಡುಪಿಯ ಕೊಳಂಬೆ ಪುತ್ತೂರು ಗ್ರಾಮದಲ್ಲಿ ನಡೆದಿದೆ. ಅತ್ತ ಸ್ವಚ್ಛ ಭಾರತ್‌ಗೆ ಪ್ರಧಾನಿ ಮೋದಿ ಕರೆ ನೀಡಿದ್ದು, ಇದಕ್ಕೆ ಹಿರಿಯರು-ಕಿರಿಯರೆನ್ನದಂತೆ ಎಲ್ಲರೂ ಸಾಥ್ ಕೊಟ್ಟು ಬೀದಿ ಬೀದಿಗಳನ್ನ ಸ್ವಚ್ಛ ಮಾಡುವ ಕೆಲಸ ಮಾಡುತ್ತಿದ್ದಾರೆ.

ಆದರೆ ಇಲ್ಲೊಬ್ಬ ಹೋಟೇಲ್ ಮಾಲಕ ತನ್ನ ಹೋಟೇಲ್ ತ್ಯಾಜ್ಯವನ್ನು ರಸ್ತೆ ಬದಿಯಲ್ಲೇ ಎಸೆಯುತ್ತಿದ್ದಾನೆ. ಸ್ವಚ್ಚವಾಗಿದ್ದ ರಸ್ತೆ ಬದಿಯಲ್ಲಿ ಕಸ ಹಾಕೋದನ್ನ ಸ್ಥಳಿಯರು ಗಮನಿಸಿದ್ದಾರೆ. ಮಾತ್ರವಲ್ಲ್ದೇ ಅಲ್ಲಿಂದ ಹೊರಟಿದ್ದ ಮಾಲಿಕನನ್ನು ಹಿಂಬಾಲಿಸಿ ವಾಪಾಸ್ ಕರೆದು ಕಸವನ್ನ ಸ್ವಚ್ಚಗೊಳಿಸಿ ಎಚ್ಚರಿಕೆ ನೀಡಿದ್ದಾರೆ. ಇನ್ನು ಇದಕ್ಕೆ ಹೊಟೇಲ್ ಮಾಲಿಕ ಕ್ಷಮೆ ಯಾಚಿಸಿದ್ದು, ಮುಂದೆ ಎಲ್ಲೆಂದರಲ್ಲಿ ಕಸ ಹಾಕುವುದಿಲ್ಲ ಎಂದು ತಪ್ಪೊಪ್ಪಿಕೊಂಡಿದ್ದಾನೆ.

Related posts

Leave a Reply