Breaking News

ರಸ್ತೆ ಬದಿ ಭಿಕ್ಷೆ ಬೇಡುತ್ತಿದ್ದ ವೆಂಕಟರಮಣ , ಅಂಗವಿಕಲರ ಇಲಾಖೆ ಸಹಾಚಿiದಿಂದ ಸ್ಪೂರ್ತಿ ಧಾಮಕ್ಕೆ

ಅವರೊಬ್ಬರು ಒಳ್ಳೆ ಮನೆತನದಿಂದ ಬಂದ ವ್ಯಕ್ತಿ. ಲಾಟರಿ ಟಿಕೆಟ್ ಮಾರಿ ಜೀವನ ಸಾಗಿಸುತ್ತಿದ್ದರು. ಆದ್ರೆ ಇದೀಗ ರಸ್ತೆ ಬದಿಯಲ್ಲಿ ಭಿಕ್ಷೆ ಬೇಡಬೇಕಾದ ಪರಿಸ್ಥಿತಿ ಬಂದಿದೆ. ಸಮಾಜಸೇವಕರು ಹಾಗೂ ಇಲಾಖೆಯವರ ಸಹಕಾರದಿಂದ ಸೂಕ್ತ ವ್ಯವಸ್ಥೆ ಮಾಡಿದರೂ ಇದೀಗ ಮತ್ತೆ ಬೀದಿ ಬದಿಯಲ್ಲಿ ವಾಸ ಮಾಡುತ್ತಿದ್ದಾರೆ.

ಇವರ ಹೆಸರು ವೆಂಕಟರಮಣ. ಉಡುಪಿಯ ಕೃಷ್ಣ ವ್ಮಠ ಪರಿಸರದವರು. ಇವರ ಸಹೋದರ ಎಲೈಸಿಯಲ್ಲಿ ನೌಕರ. ವೆಂಕಟರಮಣ ಅವರು ಲಾಟರಿ ಇದ್ದಾಗ ಲಾಟರಿ ಮಾರಿಕೊಂಡು ಜೀವನ ಸಾಗಿಸುತ್ತಿದ್ದರು. ಆದ್ರೆ ಕಾಲಿನ ಸಮಸ್ಯೆ ಆದಾಗ ನಡೆಯಲು ಆಗದೇ ಇರುವ ಸಚಿದರ್ಬದಲ್ಲಿ ಮನೆಯಲ್ಲಿ ಜಗಳವಾಡಿ ಮನೆಯಿಂದ ಹೊರಗೆ ಬೀಳಬೇಕಾಯಿತು. ಅದರ ನಂತರವೂ ಲಾಟರಿ ಟಿಕೆಟ್ ಮಾರಿಕೊಂಡು, ಕೃಷ್ಣ ಮಠದಲ್ಲಿ ಭಜನೆ ಮಾಡಿಕೊಂಡು ಜೀವನ ಸಗಿಸುತ್ತಿದ್ದರು. ಆದ್ರೆ ಆರೋಗ್ಯದ ಸಮಸ್ಯೆ ಉಚಿಟಾಗಿ ಬೀದಿಗೆ ಬೀಳುವ ಪರಿಸ್ಥಿತಿ ಎದುರಾಯಿತು. ಈ ಹಿಂದಿನ ಡಿಸಿ ವಿಶಾಲ್ ಅವರು ಅಂಗವಿಕಲರ ಇಲಾಖೆಯ ವತಿಯಿಂದ ಸ್ಪೂರ್ತಿ ಆಸ್ರಮಕ್ಕೆ ಸೇರಿಸುವ ಕೆಲಸ ಮಾಡಿದ್ದರು. ಆದ್ರೆ ಅಣ್ನನ ಮನೆಗೆ ಹೋಗುತ್ತೇನೆ ಎಂದಿದ್ದ ವೆಂಖಟರಮಣ ರಸ್ತೆಯಲ್ಲಿ ಭಿಕ್ಷೆ ಬೇಡುವ ಕಾಯಕವನ್ನು ಮುಂದುವರೆಸಿದ್ದರು. ಸಮಾಜ ಸೇವಕ ನಿತ್ಯಾನಚಿದ ಒಳಕಾಡು ಅವರು ತಮ್ಮ ಸ್ವಂತ ಮುತುವರ್ಜಿಯಿಂದ ವೆಂಕಟರಮಣ ಅವರನ್ನು ೪-೫ ಬಾರಿ ಆಸ್ಪತ್ರೆಗೆ ಸೇರಿಸಿ ಚಿಕಿಸ್ತೆ ನೀಡಿಸಿದ್ದರು. ಆದ್ರೆ ಆಸ್ಪತ್ರೆಯಿಂದ ಹೊರ ಬಂದಾಗ ಮತ್ತೆ ಬೇಡಿ, ಮನಸಿಕ ಅಸ್ವಸ್ಥನಚಿತೆ ರಸ್ತೆ ಬದಿಯಲ್ಲಿ ವಾಸ ಮಾಡುವ ಕಾಯಕ ಮುಂದುವರೆಸಿದ್ದರು. ಇದೀಗ ಅಲಂಕಾರ್ ಚಿತ್ರಮಂದಿರದ ಬಳಿ ಭಿಕ್ಷೇ ಬೇಡುತ್ತಿದ್ದು ನಿತ್ಯಾನಚಿದ ಒಳ್ಕಾಡು ಅವರ ಮೂಲಕ ವಿಕಲಚೇತನ ಇಲಾಖೆಯ ಸಹಾಚಿiದಿಂದ ಮತ್ತೆ ಸ್ಪೂರ್ತಿ ಆಶ್ರಮಕ್ಕೆ ಸೇರಿಸುವ ಕೆಲಸ ನಡೆದಿದೆ. ಈ ರೀತಿಯಾಗಿ ಬೇಡಿ ತಿನ್ನುವ ವೆಂಕಟರಮಣ ಅವರ ಹಿಂದೆ ದುಡಿಸಿಕೊಂಡು ಹಣ ಕೀಳುವ ಗುಂಪೇ ಇದೆ ಎಚಿದು ಅನುಮಾನ ವ್ಯಕ್ತವಾಗಿದ್ದು ವೆಂಕಟರಮಣ ಅವರು ಅನೇಕರಿಗೆ ಹಣವನ್ನು ಸಾಲ ನೀಡಿದ್ದಾರೆ ಎಚಿದು ಹೇಳುತ್ತಿದ್ದಾರೆ. ಆದರೂ ಸಹ ಅಸಹ್ಯ ರೀತಿಯಲ್ಲಿ ಬಿದ್ದುಕೊಂಡು ಸಾರ್ವಜನಿಕವಾಗಿ ಭಿಕ್ಷೆ ಬೇಡುತ್ತಿರುವ ವೆಂಕಟರಮಣ ಅವರು ಇದೀಗ ಸ್ಪೂರ್ತಿ ಆಶ್ರಮಕ್ಕೆ ಸೇರಿಸಲಾಗಿದೆ.
ಉಡುಪಿಯಲ್ಲಿ ಈ ರೀತಿ ಭಿಕ್ಷೆ ಬೇಡಿ ಜೀವನ ಸಾಗಿಸುವವರು ತುಂಬಾ ಮಂದಿ ಇದ್ದಾರೆ ಆದ್ರೆ ಉತ್ತಮ ಸತಿಯಲ್ಲಿರುವ ವರೂ ಸಹ ಭಿಕ್ಷೆ ಬೇಡುತ್ತಿರುವುದು , ಸಂಬಂಧಿಕರಿದ್ದರೂ ನೋಡದೇ ಬೀದಿ ಪಾಲು ಮಾಡುತ್ತಿರುವುದು ಮಾತ್ರ ದೃರಾದೃಷ್ತಕರ ..
ವರದಿ:ಪಲ್ಲವಿ ಸಂತೋಷ್

Related posts

Leave a Reply