Header Ads
Header Ads
Breaking News

ರಾಘವೇಂದ್ರ ಸಪ್ತಾಹದ ರಜತೋತ್ಸವ ಫೆ.16ರಿಂದ 22ರ ವರೆಗೆ ಆಯೋಜನೆ ಪಲಿಮಾರು ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಕಾರ್ಯಕ್ರಮ

ಪರ್ಯಾಯ ಪಲಿಮಾರು ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಫೆ.16ರಿಂದ 22ರ ತನಕ ಶ್ರೀ ರಾಘವೇಂದ್ರ ಸಪ್ತಾಹದ ರಜತೋತ್ಸವ ಕಾರ್ಯಕ್ರಮ ನಡೆಯಲಿದೆ.ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಪಲಿಮಾರು ವಿದ್ಯಾಧೀಶ ತೀರ್ಥ ಶ್ರೀಪಾದರು ಮಾಹಿತಿಯನ್ನು ನೀಡಿದ್ದಾರೆ. ರಾಜಾಂಗಣದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು ಫೆ.16ರಂದು ಮಂತ್ರಾಲಯ ಮಠದ ಸುಬುಧೇಂದ್ರ ತೀರ್ಥ ಶ್ರೀಪಾದರು ರಜತೋತ್ಸವ ಉದ್ಘಾಟನೆ ಮಾಡಲಿದ್ದು ವಿಶೇಷ ಅತಿಥಿಗಳಾಗಿ ಮಂತ್ರಾಲಯದ ಪಂಡಿತ ಕೇಸರಿ ವಿದ್ವಾನ್ ರಾಜಾಗಿರಿ ಆಚಾರ್ಯ ,ವಿದ್ವಾನ್ ಶಿಬರೂರು ವೇದವ್ಯಾಸ ತಂತ್ರಿ ಮುಂತಾದವರು ಉಪಸ್ಥಿತರಿರುವರು .16ರಿಂಸ 22ರತನಕ ನಿರಂತರ ವಿವಿಧ ಧಾರ್ಮಿಕ ಉಪನ್ಯಾಸ, ಹೋಮ-ಹವನ ನಡೆಯಲಿದೆ ಎಂದು ಮಾಹಿತಿ ನಿಡಿದರು.

ವರದಿ:ಪಲ್ಲವಿ ಸಂತೋಷ್

Related posts

Leave a Reply