Header Ads
Header Ads
Breaking News

ರಾಜಕೀಯ ಕಾರಣಕ್ಕಾಗಿ ದೈವ ನಿಂದನೆಯ ಸುಳ್ಳು ಆರೋಪ :ಕರಾವಳಿ ಕೇಸರಿ ಯೂತ್ ಕ್ಲಬ್‌ನಿಂದ ನ್ಯಾಯಕ್ಕಾಗಿ ಒತ್ತಾಯ

ಮೂಡುಬಿದಿರೆ : ಇತ್ತೀಚೆಗೆ ರಚನೆಯಾದ “ಮೂರ್ತೆ ಮುದರೆ” ನಾಟಕದಲ್ಲಿ ಯಾವುದೇ ದೈವ ನಿಂದನೆ, ಜನಾಂಗೀಯ ನಿಂದನೆ ಅಥವಾ ಕಸುಬು ನಿಂದನೆ ನಡೆದಿಲ್ಲ. ಆದರೂ ನಾಟಕ ರಚನೆಗಾರ ಗಣೇಶ್ ಅಳಿಯೂರು ವಿರುದ್ಧ ಜನಾಂಗೀಯ ತುಳಿತ ಎಂದು ದಯಾನಂದ ಕತ್ತಾಲಸಾರ್ ಸಹಿತ ಹಲವರು ಪೊಲೀಸರಿಗೆ ದೂರು ನೀಡಿದ್ದಾರೆ ಇದಕ್ಕೆ ನಮ್ ವಿರೋಧವಿದೆ ಎಂದು ರಾಮಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತ ಪಡಿಸಿದರು. ಮೂರ್ತೆಮುದರೆ ಒಂದು ದೈವ ನಂಬಿಕೆಯನ್ನು ಎತ್ತಿ ಹಿಡಿಯುವ ನಾಟಕವಾಗಿದ್ದು ಇದರಲ್ಲಿ ಯುವ ಜನತೆಯಲ್ಲಿ ದೈವ ನಂಬಿಕೆಯನ್ನು ಹೆಚ್ಚಿಸುವ ಹಲವು ಅಂಶಗಳಿವೆ. ಗಣೇಶ್ ಅಳಿಯೂರು ಕೂಡಾ ಹುಟ್ಟಿನಿಂದ ದೈವ ನಂಬಿಕೆಯನ್ನು ಬೆಳೆಸಿಕೊಂಡು ಬಂದವರು.

ನಾಟಕವನ್ನು ವೀಕ್ಷಿಸದ ಹಲವರು ರಾಜಕೀಯ ಪ್ರೇರಿತವಾಗಿ ಸಂಚು ರೂಪಿಸಿದ್ದು, ನಾಟಕ ರಚನೆಕಾರನ ಆತ್ಮಸ್ಥೈರ್ಯವನ್ನು ಕುಗ್ಗಿಸುವ ಷಡ್ಯಂತ್ರ್ಯವಾಗಿದೆ ಎಂದರು. ಸಮಿತ್‌ರಾಜ್ ದರೆಗುಡ್ಡೆ ಮಾತನಾಡಿ ಗಣೇಶ್ ಅಳಿಯೂರು ಅವರಿಗೆ ದಿನನಿತ್ಯ ಹಲವು ಬೆದರಿಕೆ ಕರೆಗಳು ಬರುತ್ತಿದ್ದು, ದೈವ ದೇವರುಗಳ ಹೆಸರಿನಲ್ಲಿ ಶಾಪ ಹಾಕಲಾಗುತ್ತಿದೆ. ದೈವ ದೇವರ ನಿಂದನೆ ಪ್ರಸ್ತುತ ಟಿವಿ ಮಾಧ್ಯಮ, ಸ್ಥಬ್ಧಚಿತ್ರ ಮತ್ತಿತರ ಕ್ಷೇತ್ರಗಳಲ್ಲಿ ನಡೆಯುತ್ತಿದ್ದು ಅವುಗಳ ಬಗ್ಗೆ ಮಾತನಾಡದ ಕೆಲ ಮಂದಿ ಕೇವಲ ಅಳಿಯೂರು ಅವರ ನಾಟಕವನ್ನೇ ಗುರಿ ಮಾಡಿದ್ದಾರೆ. ಅಂತಹ ನಿಂದನೆ ಈ ನಾಟಕದಲ್ಲಿಲ್ಲ ಎಂದರು.ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರ.ಕಾರ್ಯದರ್ಶಿ ಸಂದೀಪ್, ಅಶೋಕ್ ಬೇಲೊಟ್ಟು, ಗೌರವ ಸಲಹೆಗಾರ ಸುಧಾಕರ ಸುವರ್ಣ, ರಾಜು ದರೆಗುಡ್ಡೆ, ಜಗದೀಶ್ ಕೋಟ್ಯಾನ್, ಪ್ರಕಾಶ್ ಮಾರ್ನಾಡ್, ಸುರೇಂದ್ರ ಉಪಸ್ಥಿತರಿದ್ದರು.

Related posts

Leave a Reply