Header Ads
Header Ads
Header Ads
Breaking News

ರಾಜಕೀಯ ದುರುದ್ದೇಶ ಪೂರಿತ ಆರೋಪ ಹರಿಕೃಷ್ಣ ಬಂಟ್ವಾಳ್ ಆರೋಪಕ್ಕೆ ಸಚಿವ ರೈ ತಿರುಗೇಟು

ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ ಆರೋಪಕ್ಕೆ ಸಚಿವ ರಮಾನಾಥ್ ರೈ ಮಂಗಳೂರಿನಲ್ಲಿ ತಿರುಗೇಟು ನೀಡಿದ್ದಾರೆ. ನನ್ನ ಬಳಿ ಅಕ್ರಮ ಭೂಮಿ ಇಲ್ಲ, ಪಿತ್ರಾರ್ಜಿತ ಭೂಮಿಯಷ್ಟೆ ಇರುವುದು. ವಿವಾದಿತ ರಬ್ಬರ್ ತೋಟ 8 ಎಕ್ರೆ ಪಟ್ಟಾ ಭೂಮಿಯಲ್ಲಿದೆ ಎಂದು ಸಚಿವ ರೈ ಸ್ಪಷ್ಟನೆ ನೀಡಿದ್ದಾರೆ.

ಸದ್ರಿ ಜಾಗದ ದಾಖಲೆ ಪತ್ರ ನನ್ನಲ್ಲಿದೆ. ನನ್ನ ಪತ್ನಿ ಹೆಸರಲ್ಲಿರುವ ಮಾಣಿಯ 3 ಎಕ್ರೆ ಕುಮ್ಕಿ ಭೂಮಿ ಆಕೆಯ ಕುಟುಂಬದ್ದು , ಕುಮ್ಕಿ ಭೂಮಿಯನ್ನು ಆಕೆಯ ತಂದೆಯೇ ಮಗಳಿಗೆ ಮಾಡಿಕೊಟ್ಟಿದ್ದಾರೆ .ಈ ಬಗ್ಗೆ ಸೋದರನ ದೂರಿನಂತೆ ಎಸಿ ಕೋರ್ಟ್ ತಡೆಯಾಜ್ಞೆ ನೀಡಿದೆ. ಇದು ರಾಜಕೀಯ ದುರುದ್ದೇಶದಿಂದ ಆರೋಪ ಮಾಡುತ್ತಿದ್ದಾರೆ ಎಂದು ಸಚಿವ ರಮಾನಾಥ ರೈ ಹೇಳಿದರು.

ವರದಿ: ನಾಗೇಶ್ ಕಾವೂರು, ಮಂಗಳೂರು

Related posts

Leave a Reply