Header Ads
Header Ads
Breaking News

ರಾಜಕೀಯ ಲಾಭಕ್ಕಾಗಿ ಬಿಜೆಪಿಯಿಂದ ಅಯೋಧ್ಯೆ ರಾಮಮಂದಿರ ಜಪ: ಸುಳ್ಯದಲ್ಲಿ  ವೆಂಕಪ್ಪ ಗೌಡ 

ಚುನಾವಣೆ ಹತ್ತಿರ ಬಂದಾಗ ಬಿಜೆಪಿಗರು ಅಯೊಧ್ಯೆಯ ರಾಮಮಂದಿರದ ಜಪ ಮಾಡುತ್ತಿದ್ದಾರೆ. ನಿಜವಾದ ಕಾಳಜಿ ಇದ್ದರೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಬೇಕೆಂದು ಬಿಜೆಪಿ ಮತ್ತು ಸಂಘ ಪರಿವಾರದವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯ ವಿರುದ್ದ ಜನಾಗ್ರಹ ಸಭೆ ನಡೆಸಲಿ. ಈಗ ಅಲ್ಲಲ್ಲಿ ನಡೆಯುತ್ತಿರುವ ಜನಾಗ್ರಹ ಸಭೆಯು ಮುಂದಿನ ಚುನಾವಣಾ ದೃಷ್ಟಿಯಿಂದ ನಡೆಸುವ ನಾಟಕ ಎಂದು ಕೆ.ಪಿ.ಸಿ.ಸಿ.ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಟೀಕಿಸಿದ್ದಾರೆ.

ಸುಳ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಮಾಜದಲ್ಲಿ ಬಿರುಕನ್ನು ಸೃಷ್ಠಿಸಿ ಶಾಂತಿಯನ್ನು ಕದಡಿ ರಾಜಕೀಯ ಲಾಭ ಪಡೆಯುವುದು ಬಿಜೆಪಿಯ ಉದ್ದೇಶ ಎಂದು ಆರೋಪಿಸಿದರು. ದೇಶದಲ್ಲಿ ಅಭಿವೃದ್ಧಿ ಮಾಡುವ ಬದಲು ಮೂರ್ತಿಗಳನ್ನು ನಿರ್ಮಿಸಿ ಲಾಭ ಪಡೆಯಬಹುದು ಎಂಬುದು ಬಿಜೆಪಿಗರ ಲೆಕ್ಕಾಚಾರ ಅದಕ್ಕಾಗಿ ಸಾವಿರಾರು ರೂ ಖರ್ಚು ಮಾಡಿ ಎಲ್ಲಾ ರಾಜ್ಯಗಳಲ್ಲಿಯೂ ಮೂರ್ತಿಗಳನ್ನು ನಿರ್ಮಿಸುತ್ತಿದ್ದಾರೆ. ಜನರ ಮೇಲೆ ಎಷ್ಟೇ ತೆರಿಗೆ ಹೊರೆ ಹಾಕಿ ಜನರನ್ನು ಸುಲಿಗೆ ಮಾಡಿದರೂ ದೇಶದ ಆರ್ಥಿಕ ಸ್ಥಿತಿ ದೀವಾಳಿಯಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್‌ನಲ್ಲಿರುವ ರಿಸರ್ವ್ ಮೊತ್ತವನ್ನು ಕೇಳಿರುವುದೇ ಇದಕ್ಕೆ ಉದಾಹರಣೆ. ಆರ್‌ಬಿಐಯ ಮೀಸಲು ಮೊತ್ತವನ್ನು ನೀಡುವಂತೆ ಕೇಳಿದ ಮೊದಲ ಸರ್ಕಾರ ಮತ್ತು ಪ್ರಧಾನ ಮಂತ್ರಿ ಇದ್ದರೆ ಅದು ನರೇಂದ್ರ ಮೋದಿ ಎಂದು ಅವರು ಹೇಳಿದರು. ಈ ರೀತಿ ಮುಂದುವರಿದರೆ ದೇಶದ ಆರ್ಥಿಕ ಪರಿಸ್ಥಿತಿ ಏನಾಗಬಹುದು ಎಂಬ ಆತಂಕ ಎದುರಾಗಿದೆ. ಕಾಂಗ್ರೆಸ್ ಪಕ್ಷ ಸಂಘಟನೆಯ ದೃಷ್ಠಿಯಿಂದ ಶಕ್ತಿ ಕಾರ್ಯಕ್ರಮದಡಿ ಪಕ್ಷವನ್ನು ಸಂಘಟಿಸಲು ಕೆಪಿಸಿಸಿ ಉಸ್ತುವಾರಿಗಳನ್ನು ನೇಮಕ ಮಾಡಲಾಗಿದೆ. ಅಲ್ಲದೇ ಕಾರ್ಯಕರ್ತರನ್ನು ಮತ್ತು ಮತದಾರರನ್ನು ಮೊಬೈಲ್ ಸಂಖ್ಯೆಯ ಮುಲಕ ನೋಂದಾಯಿಸುವ ಕೆಲಸ ಪಕ್ಷದ ವತಿಯಿಂದ ನಡೆಯುತಿದೆ ಎಂದು ವಿವರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಡಿ.6ರಂದು ಸುಳ್ಯಕ್ಕೆ ಆಗಮಿಸಲಿದ್ದಾರೆ. ಅ.2.30ಕ್ಕೆ ಜನ ಸಂಪರ್ಕ ಸಭೆ ನಡೆಸಿ ಹಕ್ಕು ಪತ್ರ ವಿತರಣೆ ಮಾಡಲಿದ್ದಾರೆ. ಬಳಿಕ ನಗರ ಪಂಚಾಯಿತಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಸುಳ್ಯ ನಗರದ ಕುಡಿಯುವ ನೀರಿನ ಸಮಸ್ಯೆ, ನಿವೇಶನ ಮತ್ತು ವಸತಿ ಮಂಜೂರಾತಿ ಸಮಸ್ಯೆಯ ಬಗ್ಗೆ ಸಚಿವರ ಗಮನಕ್ಕೆ ತಂದು ಅನುದಾನ ಬಿಡುಗಡೆ ಮಾಡಲು ಮನವಿ ಮಾಡಲಾಗುವುದು ಎಂದರು. ೧೨ ಲಕ್ಷ ರೂ ವೆಚ್ಚದಲ್ಲಿ ಅನುಷ್ಠಾನಗೊಂಡ ದುಗ್ಗಲಡ್ಕ ಟೌನ್ ಫೀಡರ್‌ನ ಉದ್ಘಾಟನೆ, ಕೊಳಂಜಿಕೋಡಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಅಳವಡಿಸಿದ ವಿದ್ಯುತ್ ಪರಿವರ್ತಕದ ಉದ್ಘಾಟನೆ, ದುಗ್ಗಲಡ್ಕ ದರ್ಗಾ ಶರೀಫ್‌ಗೆ ಪ್ರವಾಸೋದ್ಯಮ ಇಲಾಖೆಯ ೨೫ ಲಕ್ಷ ಅನುದಾನದಲ್ಲಿ ನಿರ್ಮಿಸುವ ‘ಯಾತ್ರಿ ನಿವಾಸ್’ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಎಸ್.ಸಂಶುದ್ದೀನ್, ಕೆ.ಗೋಕುಲ್‌ದಾಸ್, ಕೆ.ಎಂ.ಮುಸ್ತಫಾ, ಸಿದ್ದಿಕ್ ಸುಳ್ಯ, ನಂದರಾಜ ಸಂಕೇಶ, ದಿನೇಶ್ ಅಂಬೆಕಲ್ಲು, ಭವಾನಿಶಂಕರ ಕಲ್ಮಡ್ಕ ಶಾಫಿ ಕುತ್ತಮೊಟ್ಟೆ ಉಪಸ್ಥಿತರಿದ್ದರು.

Related posts

Leave a Reply