Header Ads
Header Ads
Breaking News

ರಾಜಸತ್ತೆಯ ಸಂಬಿಕೆ ಗಳಿಸಿದ್ದ ಕೊಟ್ಟಾರಿ ಸಮಾಜ, ಮಂಗಳೂರಿನಲ್ಲಿ ಕೊಟ್ಟಾರಿ ಯುವ ವೇದಿಕೆ ಉದ್ಘಾಟನೆ

ಕೊಟ್ಟಾರಿ ಸಮಾಜವು ಇಂದಿಗೂ ತನ್ನ ಘನತೆಯನ್ನು ಕಾಯ್ದುಕೊಂಡಿದೆ. ಇವರು ವಿಶ್ವಾಸಾರ್ಹರು ಎಂಬ ನಿಟ್ಟಿನಲ್ಲಿ ರಾಜರ ಆಳ್ವಿಕೆಯಲ್ಲಿ ಕೊಟ್ಟಾರಿ ಸಮಾಜಕ್ಕೆ ಖಜಾನೆ ಕಾಯುವ ಜವಾಬ್ದಾರಿ ನೀಡಲಾಗಿತ್ತು ಎಂದು ಸಂಸದ ನಳಿನ್ ಕುಮಾರ್ ಹೇಳಿದರು.
ಪುರಭವನದಲ್ಲಿ ಕೊಟ್ಟಾರಿ ಯುವ ವೇದಿಕೆಯ ಉದ್ಘಾಟನೆ, ಯುವ ಸಮಾವೇಶ ಹಾಗೂ ವಿದ್ಯಾನಿಧಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಕೊಟ್ಟಾರಿ ಸಮುದಾಯ ಇತರ ಎಲ್ಲ ಸಮುದಾಯಗಳೊಂದಿಗೂ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಮುಂದೆ ಸಾಗುತ್ತಿದೆ. ಯುವ ಸಮುದಾಯಕ್ಕೆ ಸಂಸ್ಕಾರ, ನೈತಿಕತೆ, ಮೌಲ್ಯಾಧಾರಿತ ಶಿಕ್ಷಣದ ಆವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸಮಾಜದ ಹಿರಿಯರು ಯುವ ಜನರಿಗೆ ದಾರಿ ತೋರಿಸಬೇಕಾಗಿದೆ. ಎಂದು ಹಾರೈಸಿದರು.
ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಆಶೀರ್ವಚನ ನೀಡಿ, ಯುವಶಕ್ತಿ ಮನಸ್ಸು ಮಾಡಿದರೆ ಸದೃಢ ದೇಶ ನಿರ್ಮಾಣವಾಗುವುದರಲ್ಲಿ ಸಂಶಯವಿಲ್ಲ. ಅದಕ್ಕಾಗಿ ಮೌಲ್ಯಧಾರಿತ ವಿಚಾರಗಳೊಂದಿಗೆ ಯುವ ಜನರನ್ನು ಮುನ್ನಡೆಸುವ ಮಾರ್ಗದರ್ಶಕರು ಬೇಕು ಎಂದರು. ಕರಾವಳಿ ಕಾಲೇಜು ಸಮೂಹ ಸಂಸ್ಥೆಯ ಅಧ್ಯಕ್ಷ ಗಣೇಶ್ ರಾವ್ ಮಾತನಾಡಿ, ಸಮುದಾಯದಲ್ಲಿ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರನ್ನು ಗುರುತಿಸಿ ಅವರಿಗೆ ಸಹಾಯ ಮಾಡುವ ಗುರಿ ಹೊಂದಿರುವ ನೂತನ ವೇದಿಕೆ ಉತ್ತಮ ಕಾರ್ಯಗಳಿಂದ ಪ್ರಬಲ ಸಮುದಾಯಗಳಿಗೆ ಮಾದರಿಯಾಗಿ ಬೆಳೆಯಬೇಕು. ಎಡಪದವು ಭೂತನಾಥೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ವಿಜಯನಾಥ ವಿಠಲ್ ಶೆಟ್ಟಿ ಉದ್ಘಾಟಿಸಿದರು. ದ.ಕ. ಜಿಲ್ಲಾ ಕೊಟ್ಟಾರಿ ಸಮಾಜ ಸುಧಾರಕ ಸಂಘದ ಅಧ್ಯಕ್ಷ ಎಂ. ಪುರುಷೋತ್ತಮ ಕೊಟ್ಟಾರಿ ಅಧ್ಯಕ್ಷತೆ ವಹಿಸಿದ್ದರು.
ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರ ಕುಮಾರ್, ಶಾಸಕ ಜೆ. ಆರ್. ಲೋಬೋ, ಮೇಯರ್ ಕವಿತಾ ಸನಿಲ್, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಚಿತ್ರನಟ ನವೀನ್ ಡಿ. ಪಡೀಲ್, ಸಮಾಜದ ಪ್ರಮುಖರಾದ ವಾಸು ದೇವ ಕೊಟ್ಟಾರಿ, ಉಮಾನಾಥ ಕೊಟ್ಟಾರಿ ಮೊದಲಾದವರು ಉಪಸ್ಥಿತರಿದ್ದರು.

Related posts

Leave a Reply