Header Ads
Header Ads
Breaking News

ರಾಜೀವ್ ಗಾಂಧಿ ಕಾಲದಲ್ಲಿ ವಿ. ಪಿ. ಸಿಂಗ್ ಸೂಚನೆ, ಕೊನೆಗೂ 2017ರಲ್ಲಿ ಮಧ್ಯ ರಾತ್ರಿ ಜಿ‌ಎಸ್‌ಟಿ ಜಾರಿ

1986, ಫೆಬ್ರುವರಿಯಲ್ಲಿ ಅಬಕಾರಿ ಸುಂಕ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆ ಆಗಬೇಕು ಎಂದು ಹಣಕಾಸು ಸಚಿವ ವಿಶ್ವನಾಥ್ ಪ್ರತಾಪ್ ಸಿಂಗ್
೧೯೮೬-೮೭ರ ಬಜೆಟ್ನಲ್ಲಿ ಪ್ರಸ್ತಾಪ ಮಾಡಿದ್ದರು.
೨೦೦೦ದಲ್ಲಿ ಜಿ‌ಎಸ್ಟಿಯ ಸ್ವರೂಪವನ್ನು ವಿನ್ಯಾಸ ಮಾಡಲು ಪಶ್ಚಿಮ ಬಂಗಾಳದ ಹಣಕಾಸು ಸಚಿವ ಅಸೀಂ ದಾಸ್ಗುಪ್ತಾ ನೇತೃತ್ವದಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಸಮಿತಿ ರಚನೆ. ೨೦೦೩ರಲ್ಲಿ ತೆರಿಗೆ ಸುಧಾರಣೆ ಶಿಫಾರಸಿಗಾಗಿ ವಿಜಯ್ ಕೇಳ್ಕರ್ ನೇತೃತ್ವದಲ್ಲಿ ಕಾರ್ಯಪಡೆ ರಚನೆ. ೨೦೦೪ರಲ್ಲಿ ಜಾರಿಯಲ್ಲಿದ್ದ ತೆರಿಗೆ ಪದ್ಧತಿಗೆ ಪರ್ಯಾಯವಾಗಿ ಜಿ‌ಎಸ್ಟಿ ಜಾರಿ ಮಾಡಬಹುದು ಎಂದು ಕೇಳ್ಕರ್ ಅವರಿಂದ ಶಿಫಾರಸು. ೨೦೦೬ರ ಫೆಬ್ರುವರಿ, ೨೮ರಂದು ಜಿ‌ಎಸ್ಟಿ ಬಗ್ಗೆ ಬಜೆಟ್ ಭಾಷಣದಲ್ಲಿ ಪ್ರಸ್ತಾವ ಮಾಡಿದ ಹಣಕಾಸು ಸಚಿವ ಪಿ. ಚಿದಂಬರಂ. ಜಿ‌ಎಸ್ಟಿ ಅನುಷ್ಠಾನಕ್ಕೆ ೨೦೧೦ರ ಏಪ್ರಿಲ್೧ರ ಗಡವು ಹೇಳಿದರು.
೨೦೦೮ರಲ್ಲಿ ಜಿ‌ಎಸ್ಟಿ ಅನುಷ್ಠಾನ ನೀಲನಕ್ಷೆ ಸಿದ್ಧಪಡಿಸಲು ಎಲ್ಲಾ ರಾಜ್ಯಗಳ ಹಣಕಾಸು ಸಚಿವರಿರುವ ಉನ್ನತಾಧಿಕಾರ ಸಮಿತಿ ರಚನೆಯಾಯಿತು. ೨೦೦೮ರ ಏಪ್ರಿಲ್ ೩೦ರಂದು ಜಿ‌ಎಸ್ಟಿ ಅನುಷ್ಠಾನ ನೀಲನಕ್ಷೆ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಉನ್ನತಾಧಿಕಾರ ಸಮಿತಿ. ೨೦೦೯ರಲ್ಲಿ ದಾಸ್ಗುಪ್ತಾ ಸಮಿತಿ ವಿನ್ಯಾಸ ಮಾಡಿದ ಜಿ‌ಎಸ್ಟಿಯ ಮೂಲ ಸ್ವರೂಪವನ್ನು ಬಹಿರಂಗಪಡಿಸಿದ ಹಣಕಾಸು ಸಚಿವ ಪ್ರಣವ್ ಮುಖರ್ಜಿ. ಮೂಲ ಸ್ವರೂಪದ ಬಗ್ಗೆ ವಿರೋಧ ಪಕ್ಷ ಬಿಜೆಪಿಯ ಆಕ್ಷೇಪ.
೨೦೧೧ರ ಮಾರ್ಚ್ ೨೨ರಂದು ಜಿ‌ಎಸ್ಜಿ ಜಾರಿಗೆ ಅನುವು ಮಾಡಿಕೊಡುವ ಉದ್ದೇಶದಿಂದ ಲೋಕಸಭೆಯಲ್ಲಿ ೧೧೫ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆ ಮಂಡಿಸಿದ ಯುಪಿ‌ಎ-೨ ಸರ್ಕಾರ.
ರಾಜ್ಯಕ್ಕೆ ಪ್ರತಿ ವರ್ಷ ರೂ. ೧೪,೦೦೦ ಕೋಟಿ ತೆರಿಗೆ ನಷ್ಟವಾಗುತ್ತದೆ ಎಂದು ಜಿ‌ಎಸ್ಟಿ ವಿರುದ್ಧ ಧ್ವನಿ ಎತ್ತಿದ ಗುಜರಾತ್ ಮುಖ್ಯಮಂತ್ರಿ
ನರೇಂದ್ರ ಮೋದಿ. ೨೦೧೪ರಲ್ಲಿ ಲೋಕಸಭೆ ವಿಸರ್ಜನೆ ಆದ ಕಾರಣ, ಸಂಸದೀಯ ಸಮಿತಿ ಪಾಸು ಮಾಡಿದ್ದ ಜಿ‌ಎಸ್ಟಿ ಮಸೂದೆ ರದ್ದಾಯಿತು. ಬಿಜೆಪಿ ನೇತೃತ್ವದ ಎನ್ಡಿ‌ಎ ಸರ್ಕಾರ ಅಧಿಕಾರಕ್ಕೆ. ಡಿಸೆಂಬರ್ ೧೯ರಂದು ಲೋಕಸಭೆಯಲ್ಲಿ ಮಸೂದೆ ಮಂಡನೆ. ಮೇ ೬ ಲೋಕಸಭೆಯಲ್ಲಿ ಮಸೂದೆಗೆ ಅನುಮೋದನೆ. ಮೇ ೧೨ರಂದು ರಾಜ್ಯಸಭೆಯಲ್ಲಿ ಮಸೂದೆ ಮಂಡನೆ. ಜಿ‌ಎಸ್ಟಿ ದರವನ್ನು ಗರಿಷ್ಠ ಶೇ. ೧೮ಕ್ಕೆ ನಿಗದಿ ಮಾಡುವಂತೆ ಕಾಂಗ್ರೆಸ್ನಿಂದ ಬೇಡಿಕೆ. ೨೦೧೬ ಜುಲೈ, ಜಿ‌ಎಸ್ಟಿ ದರವನ್ನು ಗರಿಷ್ಠ
ಶೇ. ೧೮ಕ್ಕೆ ನಿಗದಿ ಮಾಡಲು ನಿರಾಕರಿಸಿದ ಸರ್ಕಾರ. ಸೆಪ್ಟೆಂಬರ್ ೨, ಮಸೂದೆಗೆ ರಾಷ್ಟ್ರಪತಿಗಳ ಅಂಕಿತ. ಜೂನ್ ೨೧, ಜಮ್ಮು ಮತ್ತು ಕಾಶ್ಮೀರ ಹೊರತುಪಡಿಸಿ ಉಳಿದೆಲ್ಲಾ ರಾಜ್ಯಗಳು, ರಾಜ್ಯ ಜಿ‌ಎಸ್ಟಿ ಮಸೂದೆಯನ್ನು ಪಾಸು ಮಾಡಿದವು ಜೂನ್ ೨೮ರ ಮಧ್ಯರಾತ್ರಿಯಲ್ಲಿ ಜಿ‌ಎಸ್ಟಿ ಜಾರಿ ಘೋಷಣೆ.

Related posts

Leave a Reply