Header Ads
Header Ads
Header Ads
Breaking News

ರಾಜೀವ್ ಗಾಂಧಿ ವಾಣಿಜ್ಯ ಸಂಕೀರ್ಣದ ಮೊದಲ ಮಹಡಿ ಉದ್ಘಾಟನೆ

ಮೂಡುಬಿದಿರೆಯ ಪುರಸಭೆಯ ರಾಜೀವಗಾಂಧಿ ವಾಣಿಜ್ಯ ಸಂಕೀರ್ಣದ ಮೊದಲ ಮಹಡಿಯ ಅಂಗಡಿ ಕೋಣೆಗಳನ್ನು ಶಾಸಕ ಅಭಯಚಂದ್ರ ಜೈನ್ ಶಿಲಾಫಲಕವನ್ನು  ಉದ್ಘಾಟಿಸಿದರು. ಪುರಸಭಾಧ್ಯಕ್ಷೆ ಹರಿಣಾಕ್ಷಿ ಸುವರ್ಣ ಟೇಪ್ ಕತ್ತರಿಸುವ ಮೂಲಕ ಸಂಕೀರ್ಣದ ವ್ಯವಹಾರ ಚಟುವಟಿಕೆಗಳಿಗೆ ಚಾಲನೆಯನ್ನು ನೀಡಿದರು.

ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ರಾಜೀವಗಾಂಧಿ ವಾಣಿಜ್ಯ ಸಂಕೀರ್ಣದ ಮೊದಲ ಮಹಡಿ ರೂ 50.50 ಲಕ್ಷ ವೆಚ್ಚದಲ್ಲಿ ಪುರಸಭೆ ನಿರ್ಮಿಸಿದ್ದು ಇದು 7 ಅಂಗಡಿಕೋಣೆಗಳನ್ನೊಳಗೊಂಡಿದ್ದು ತಿಂಗಳಿಗೆ ರೂ 35 ಸಾವಿರ ಪುರಸಭೆಗೆ ಆದಾಯ ಬರುತ್ತದೆ. ಈ ಜಾಗ ಖಾಸಗಿ ವ್ಯಕ್ತಿಗಳ ಪಾಲಾಗುವುದರಲ್ಲಿತ್ತು ಆದರೆ ಆ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷರಾಗಿದ್ದ ನಾರಾಯಣ ದೇವಾಡಿಗರು ಕೆಲವು ಸ್ಥಾಪಿತ ಹಿತಾಸಕ್ತಿಗಳ ವಿರೋಧವಿದ್ದರು ಅದನ್ನು ಲೆಕ್ಕಿಸದೆ ರಾಜೀವಗಾಂಧಿ ವಾಣಿಜ್ಯ ಸಂಕೀರ್ಣ ನಿರ್ಮಿಸಿ ಪುರಸಭೆಗೆ ಆದಾಯ ತಂದುಕೊಟ್ಟಿದ್ದರು. ಆವತ್ತು ಅವರು ಇಂತದ್ದೊಂದು ಗಟ್ಟಿ ನಿರ್ಧಾರ ತೆಗೆದುಕೊಳ್ಳದೇ ಇರುತ್ತಿದ್ದಲ್ಲಿ ಇಂದು ಪುರಸಭೆಗೆ ಬರುವ ಆದಾಯಕ್ಕೆ ಕಡಿತವಾಗುತ್ತಿತ್ತು ಆದರೆ ಅವರ ದೃಢ ನಿರ್ಧಾರದಿಂದಾಗಿ ವಾಣಿಜ್ಯ ಸಂಕೀರ್ಣದಿಂದ ಆದಾಯ ಬರುವಂತ್ತಾಗಿದೆ ಎಂದು ಹೇಳಿದರು.

ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಮೂಡ ಅಧ್ಯಕ್ಷ ಸುರೇಶ್ ಪ್ರಭು, ಪುರಸಭಾ ಸದಸ್ಯರಾದ ರತ್ನಾಕರ ದೇವಾಡಿಗ, ಸುಪ್ರಿಯಾ ಡಿ. ಶೆಟ್ಟಿ, ಶಕುಂತಳಾ ದೇವಾಡಿಗ, ಸುರೇಶ್ ಕೋಟ್ಯಾನ್, ಬಾಹುಬಲಿ ಪ್ರಸಾದ್, ಲಕ್ಷ್ಮಣ ಪೂಜಾರಿ, ನಾಮ ನಿರ್ದೇಶಿತ ಸದಸ್ಯರಾದ ಇಕ್ಬಾಲ್ ಕರೀಂ, ಆಲ್ವೀನ್ ಮಿನೇಜಸ್, ಎಪಿ‌ಎಂಸಿ ಸದಸ್ಯ ಜೊಸ್ಸಿ ಮಿನೇಜಸ್, ಕಂದಾಯ ಅಧಿಕಾರಿ ಧನಂಜಯ್, ಎಂಜಿನಿಯರ್ ದಿನೇಶ್ ಕುಮಾರ್, ಸಿಬಂದಿ ಸುದೀಶ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply