Header Ads
Header Ads
Breaking News

ರಾಜ್ಯಕ್ಕೆ ಪ್ರತ್ಯೇಕ ಅಧಿಕೃತ ಧ್ವಜ ಕನ್ನಡಪರ ಸಂಘಟನೆಗಳ ಸ್ವಾಗತ, ಬಿಜೆಪಿ ವಿರೋಧ

 

ಕರ್ನಾಟಕ ರಾಜ್ಯ ಸರ್ಕಾರ ರಾಜ್ಯಕ್ಕೆ ಪ್ರತ್ಯೇಕ ಅಧಿಕೃತ ಧ್ವಜವಿರಬೇಕು ಎಂದು ೯ ಮಂದಿಯ ಸಮಿತಿಯನ್ನು ಮಾಡಿ ರಾಜ್ಯಧ್ವಜ ಜಾರಿಗೊಳಿಸಲು ಹೊರಟಿರುವುದಕ್ಕೆ ರಾಜ್ಯದಲ್ಲಿ ಪರ-ವಿರೋಧ ವ್ಯಕ್ತವಾಗಿದ್ದು ಅದರಲ್ಲೂ ಉಡುಪಿ ಜಿಲ್ಲೆಯಲ್ಲೂ ಪರ-ವಿರೋಧ ವ್ಯಕ್ತವಾಗಿದೆ.
ಈ ರಾಜ ಧ್ವಜದ ಪರ ನಿಂತಿರುವ ಕನ್ನಡಪರ ಸಂಘಟನೆಗಳು ಕನ್ನಡ ಪರ ಸಂಘಟನೆಗಳ ಹಾಗೂ ಸಾಹಿತಿ ಪಾಟೀಲ್ ಪುಟ್ಟಪ್ಪರಂತ ಹಿರಿಯ ಸಾಹಿತಿಗಳ ಮನವಿ ಪುರಸ್ಕರಿಸಿ ನಾಡಧ್ವಜ ಅಧಿಕೃತವಾಗಿ ಹೊರತರಲು ಸಮಿತಿ ಮೂಲಕ ಹೊರಟಿರುವುದು ಸ್ವಾಗತಾರ್ಹ ಎಂದು ಪ್ರತಿಕ್ರಿಯಿಸಿದ್ದಾರೆ.

ಇನ್ನು ಈ ಬಗ್ಗೆ ಬಿಜೆಪಿ ಮುಖಂಡ ಉದಯಕುಮಾರ್ ಶೆಟ್ಟಿ,
ಎಲೆಕ್ಷನ್ ಗಿಮಿಕ್ ಎಂದು ವಿರೋಧಿಸಿರುವ ಬಿಜೆಪಿ, ಸಿದ್ದರಾಮಯ್ಯರ ಹುಚ್ಚಾಟ ಮಿತಿಮೀರಿದೆ ಕರಾವಳಿ ಭಾಗದಲ್ಲಿ ಕೋಮುಗಲಭೆ ಹತೋಟಿ ತರುತ್ತಿಲ್ಲ ಶರತ್ ಕೊಲೆ ಆರೋಪಿಗಳ ಪತ್ತೆ ಹಚ್ಚಿಲ್ಲ ಈ ನಡುವೆ ಚುನಾವಣೆ ಮುಂದಿಟ್ಟು ಅವಾಂತರ ಮಾಡಲು ಮುಂದಾಗಿದ್ದಾರೆ ರಾಷ್ಟ್ರ ಧ್ವಜ ಇರುವಾಗ ರಾಜ್ಯಕ್ಕೆ ಪ್ರತ್ಯೇಕ ಧ್ವಜ ಏಕೆ. ಕರ್ನಾಟಕವನ್ನು ಮತ್ತೊಂದು ಕಾಶ್ಮೀರ ಮಾಡಲು ಹೊರಟಿದೆ ಬಿಜೆಪಿ ಸರ್ಕಾರದ ನಿಲುವು ಖಂಡಿಸುತ್ತದೆ ರಾಷ್ಟ್ರದ ಧ್ವಜ ಐಕ್ಯತೆ ಸಂಕೇತ ರಾಜ್ಯ ಧ್ವಜ ನಿರ್ಧಾರ ಕೈಬಿಟ್ಟು ಸಮಿತಿ ಬರ್ಖಾಸ್ತು ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ವರದಿ:ಪಲ್ಲವಿ ಸಂತೊಷ್

Related posts

Leave a Reply