Header Ads
Header Ads
Breaking News

ರಾಜ್ಯದಲ್ಲಿರುವುದು ಹಸಿದವರು ಮತ್ತು ಹಳಸಿದವರ ಸರಕಾರ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ.

 ರಾಜ್ಯದಲ್ಲಿರುವುದು ಹಸಿದವರು ಮತ್ತು ಹಳಸಿದವರ ಸರಕಾರ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ. ಈ ಕುರಿತು ಮಂಗಳೂರಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಕ್ಕಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ಹೊಂದಾಣಿಕೆ ಮಾಡುವ ಮೂಲಕ ರಾಜ್ಯದಲ್ಲಿ ಸರ್ಕಾರ ನಡೆಸುತ್ತಿದೆ. ರಾಜ್ಯದಲ್ಲಿ ಅಧಿಕಾರ ಪಡೆಯಲು ಸಾಂದರ್ಭಿಕ ಶಿಶು ಹುಟ್ಟಿಸಿಕೊಂಡಿದ್ದಾರೆ.ಈ ಜನವಿರೋಧಿ ಸರಕಾರ ಹೆಚ್ಚು ದಿನ ಬಾಳಿಕೆ ಇರೋಲ್ಲ ಎಂದು ಕಿಡಿಕಾರಿದರು. ಗುಂಡು, ತುಂಡಿನ ಪಾರ್ಟಿ ಸಂಸ್ಕೃತಿ ವಿಧಾನ ಪರಿಷತ್ ಚುನಾವಣೆಗೂ ನುಸುಳಿದೆ.ಶಿಕ್ಷಕರ ಮತ್ತು ಪದವೀಧರ ಕ್ಷೇತ್ರದ ಮತದಾರರಿಗೆ ಆಮಿಷ ಒಡ್ಡಲಾಗುತ್ತಿದೆ. ಕೈ ಬಾಯಿ ಕೆಡಿಸಿಕೊಂಡವರು ಅಭ್ಯರ್ಥಿಗಳಾಗಿದ್ದಾರೆ ಎಂದು ಕಿಡಿಕಾರಿದರು.ಇನ್ನು 2019ರಲ್ಲಿ ಮೋದಿ ಸರಕಾರ ಮತ್ತೆ ಬರದಂತೆ ಷಡ್ಯಂತ್ರ ನಡೆದಿದೆ. ಅಂತಾರಾಷ್ಟ್ರೀಯ ಷಡ್ಯಂತ್ರದ ಭಾಗವಾಗಿ ಮೋದಿ ವಿರೋಧಿಗಳು ಒಂದಾಗಿದ್ದಾರೆ.ಮತ್ತೆ ಮೋದಿ ಅಧಿಕಾರಕ್ಕೆ ಬಂದರೆ ಭಾರತ ಬಲಿಷ್ಠವಾಗುತ್ತೆ , ದೇಶದ ಪ್ರಗತಿಯನ್ನು ತಡೆಯುವುದಕ್ಕಾಗಿ ಈ ಎಲ್ಲ ಶಕ್ತಿಗಳು ಒಂದಾಗುತ್ತಿದ್ದಾರೆ. ದೇಶದ ಜನತೆ ಈ ಷಡ್ಯಂತ್ರದ ಮರ್ಮ ತಿಳಿದುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದ್ರು.

Related posts

Leave a Reply