Header Ads
Header Ads
Breaking News

ರಾಜ್ಯದಲ್ಲಿ ನಾಲ್ಕು ವರ್ಷದಲ್ಲಿ ಏನೂ ಸಾಧನೆ ಆಗಿಲ್ಲ, ಮಂಗಳೂರಿನಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು

ದೇಶದಲ್ಲಿ ಪರಿವರ್ತನೆ ಆಗುತ್ತಿದೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಪರಿವರ್ತನೆ ಆಗುತ್ತಿದೆ. ಒಟ್ಟು ೧೮ ಕಾರ್ಯಕ್ರಮಗಳು ಜಿಲ್ಲೆಯಲ್ಲಿ ನಡೆದಿದೆ. ೧೦ ಸಾವಿರ ಕೋಟಿಗೂ ಅಧಿಕ ಅನುದಾನ ತಂದಿದ್ದಾರೆ. ರಾಜ್ಯದಲ್ಲಿ ನಾಲ್ಕು ವರ್ಷದಲ್ಲಿ ಏನೂ ಸಾಧನೆ ಆಗಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಹೇಳಿದರು.
ಅವರು ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ದೇಶದಲ್ಲಿ ಕಂಡ ಅತೀ ಭ್ರಷ್ಟ ಸರ್ಕಾರ ಸಿದ್ದರಾಮಯ್ಯ ಸರ್ಕಾರ. ರೈತರ ಆತ್ಮಹತ್ಯೆಗೂ ಈ ಸರ್ಕಾರವೇ ಕಾರಣ. ಕರ್ನಾಟಕದಲ್ಲಿ ಅರಾಜಕತೆ, ಭ್ರಷ್ಟತೆ ಸೃಷ್ಟಿಯಾಗಿದೆ. ಯಡಿಯೂರಪ್ಪನವರ ಬರ ಅಧ್ಯಯನ ಪ್ರವಾಸ ಜಿಲ್ಲೆಗೂ ಬರಲಿದೆ. ಜಿಲ್ಲೆಗೆ ನಾಲ್ಕು ಜನ ಸಚಿವರಿದ್ದರೂ ಜಿಲ್ಲೆ ಅಭಿವೃದ್ಧಿಯಾಗಿಲ್ಲ. ಜಿಲ್ಲೆಯ ಮರಳು ದಂಧೆಯಲ್ಲಿ ಶಾಸಕರು ಸಚಿವರ ಕೈವಾಡವಿದೆ ಎಂದು ಆರೋಪಿಸಿದರು.

Related posts

Leave a Reply