Header Ads
Header Ads
Breaking News

ರಾಜ್ಯದಲ್ಲಿ ರೈತರ ಆತ್ಮಹತ್ಯೆ ವಿಚಾರಕ್ಕೆ ಉಡಾಫೆಯ ಉತ್ತರ ನೀಡಿದ ಸಚಿವೆ ಜಯಮಾಲಾ

ರಾಜ್ಯದಲ್ಲಿ ರೈತರ ಆತ್ಮಹತ್ಯೆ ವಿಚಾರಕ್ಕೆ ಉಡಾಫೆಯ ಉತ್ತರ ನೀಡಿದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಅವರು ಎಷ್ಟು ಪರ್ಸಂಟೇಜ್..? ಎಷ್ಟು ಜನ ರೈತರು ಹೋದರು? ಯಾವ ಕಾರಣಕ್ಕೆ ಆತ್ಮಹತ್ಯೆ ಆಯ್ತೋ ಗೊತ್ತಿಲ್ಲ ಎಂದು ಪ್ರಶ್ನಿಸಿದರು.ಉಡುಪಿಗೆ ಆಗಮಿಸಿದಾಗ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು? ಒಂದೆರಡು ಆತ್ಮಹತ್ಯೆಯಾದಾಗ ಅದರ ಸಮೀಕ್ಷೆ ನಡೆಯಬೇಕು.ರೈತರಿಗೆ ಶಕ್ತಿಮೀರಿ ಸರ್ಕಾರ ಸಹಾಯ ಮಾಡಿದೆ.ಮುಖ್ಯಮಂತ್ರಿ ಕುಮಾರಸ್ವಾಮಿ ರಾಜ್ಯದ ಜನರಲ್ಲಿ ಬೇಡಿಕೊಂಡಿದ್ದಾರೆ.ಆತ್ಮಹತ್ಯೆ ಎಲ್ಲದಕ್ಕೂ ಪರಿಹಾರ ಅಲ್ಲ ರಾಜ್ಯದ ರೈತರು ಸಹನೆಯಿಂದ ಇರಬೇಕು ಎಂದರು. ಭಾರತ್ ಬಂದ್, ರಫೇಲ್ ಹಗರಣ ಪ್ರತಿಭಟನೆ ಬಗ್ಗೆ ಮಾಹಿತಿ ಇಲ್ಲ, ಆ ನಂತರ ನಡೆದ ಘಟನೆಯ ಬಗ್ಗೆಯೂ ಮಾಹಿತಿ ಕೊಡಲಿಲ್ಲ,ನಾನು ಮೂವತ್ತು ಜಿಲ್ಲೆಗೂ ಹೋಗಬೇಕಾಗುತ್ತದೆನಾನೇನು ಇಲ್ಲೇ ಕುಳಿತುಕೊಳ್ಳೋದಕ್ಕೆ ಆಗುತ್ತಾ..? ನಾನು ಉಡುಪಿಗೆ ಬರದಿದ್ದರೂ ಬೆಂಗಳೂರಲ್ಲಿ ಕುಳಿತು ಕೆಲಸ ಮಾಡುತ್ತೇನೆ
ಜಿಲ್ಲೆಯ ಬಗ್ಗೆ, ಇಲ್ಲಿನ ಜನರ ಬಗ್ಗೆ ನನಗೆ ಗೌರವ ಇದೆ ಎಂದರು

Related posts

Leave a Reply