Header Ads
Header Ads
Breaking News

ದ್ವೀಪದೇಶದಲ್ಲಿ ಮತ್ತೆ ಮೊಳಗಲಿದೆ ಗಂಡುಕಲೆಯ ಝೇಂಕಾರ

ಬಹರೈನ್ : ಗಲ್ಫ್ ರಾಷ್ಟ್ರ ಬಹರೈನ್‍ನಲ್ಲಿ ಕರಾವಳಿಯ ಧೀಮಂತ ಕಲೆ ಯಕ್ಷಗಾನವು ಹಲವಾರು ವರ್ಷಗಳಿಂದ ನಡೆಯುತ್ತಾ ಬಂದಿದೆ. ಅಂತೆಯೇ ಈ ವರ್ಷ ಬಹರೈನ್‍ನ ಕಲಾ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಅಮ್ಮ ಕಲಾವಿದರು ಬಹರೈನ್ ,ಇವರು ಅತ್ಯಂತ ಉತ್ಸಾಹದಿಂದ ಅಮ್ಮ ಯಕ್ಷ ಸಂಭ್ರಮ ಎಂಬ ಎರಡು ದಿನಗಳ ಯಕ್ಷಗಾನ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.ತಾಯ್ನಾಡ ಸುಪ್ರಸಿದ್ಧ ಯಕ್ಷಗಾನ ಕಲಾವಿದರು ಹಾಗೂ ದ್ವೀಪದ ಹವ್ಯಾಸಿ ಕಲಾವಿದರ ಕೂಡುವಿಕೆಯಲ್ಲಿ ನವಂಬರ್ 15ರ ಗುರುವಾರ ಸಂಜೆ 6.30 ಗಂಟೆಗೆ ಅನಂತರಾಮ್ ಬಂಗಾಡಿ ವಿರಚಿತ ತುಳು ಯಕ್ಷಗಾನ ಕಾಡಮಲ್ಲಿಗೆ ಹಾಗೂ ನವಂಬರ್ 16 ರ ಸಂಜೆ 5.30 ಗೆ ಅಗರಿ ಶ್ರೀನಿವಾಸ ಭಾಗವತ ವಿರಚಿತ ಕನ್ನಡ ಯಕ್ಷಗಾನ ಶ್ರೀ ದೇವೀ ಮಹಾತ್ಮೆ ಎಂಬ ಪ್ರಸಂಗವನ್ನು ಸ್ಥಳೀಯ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ಪ್ರದರ್ಶಿಸಲಿದ್ದಾರೆ.

ಖ್ಯಾತ ಯುವ ಕಲಾವಿದ ದೀಪಕ್ ರಾವ್ ಪೇಜಾವರರವರ ನಿರ್ದೇಶನದೊಂದಿಗೆ ಸ್ಥಳೀಯ ಕಲಾವಿದರು ಭರದ ಸಿದ್ಧತೆಯಲ್ಲಿ ತೊಡಗಿದ್ದು, ಈ ಕಾರ್ಯಕ್ರಮದಲ್ಲಿ ಅತಿಥಿ ಕಲಾವಿದರಾಗಿ ತಾಯ್ನಾಂಡಿದ ಸುಪ್ರಸಿದ್ಧ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ, ಹಿಮ್ಮೇಳ ವಾದಕ ಪ್ರಶಾಂತ್ ಶೆಟ್ಟಿ ವಗೆನಾಡು, ಮುಮ್ಮೇಳದ ದಿಗ್ಗಜರಾದ ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ಗಣೇಶ್ ಚಂದ್ರಮಂಡಲ, ಅಪ್ರತಿಮ ಪುಂಡುವೇಷಧಾರಿಗಳಾದ ಶಶಿಧರ್ ಕುಲಾಲ್ ಕನ್ಯಾನ, ರಾಹುಲ್ ಶೆಟ್ಟಿ ಕುಡ್ಲ , ಯುವ ಹಾಸ್ಯಗಾರ ದಿನೇಶ್ ಶೆಟ್ಟಿಗಾರ್ ಕೋಡಪದವು , ಹವ್ಯಾಸಿ ಭಾಗವತ ಶ್ರೀ ರೋಶನ್ ಕೋಟ್ಯಾನ್ ಭಾಗವಹಿಸಿ ಮೆರುಗು ನೀಡಲಿದ್ದಾರೆ. ಈ ಎರಡೂ ದಿನಗಳ ಯಕ್ಷಗಾನ ಪ್ರದರ್ಶನಕ್ಕೆ ಮುಕ್ತ ಪ್ರವೇಶವಿದೆ.

Related posts

Leave a Reply