Header Ads
Breaking News

ರಾಜ್ಯದ ಕೋಸ್ಟ್‌ಗಾರ್ಡ್ ವತಿಯಿಂದ ವೀರ ಸೈನಿಕರಿಗೆ ನುಡಿನಮನ : ಮಂಗಳೂರಿನ ಕೋಸ್ಟ್‌ಗಾರ್ಡ್‌ನ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮ

ಬಾಂಗ್ಲಾದೇಶ ವಿಮೋಚನೆಗಾಗಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ನಡೆದ ಸಮರದಲ್ಲಿ ಭಾರತ ವಿಜಯದ ಪತಾಕೆ ಹಾರಿಸಿ 48 ವರ್ಷ ಕಳೆದಿದೆ. 1971ರ ಡಿ. 3ರಂದು ಆರಂಭವಾದ ಇಂಡೋ-ಪಾಕಿಸ್ತಾನ್ ಯುದ್ಧ 13 ದಿನಗಳವರೆಗೂ ನಡೆಯಿತು. ಬಳಿಕ ಭಾರತೀಯ ಸೇನೆಯ ಪ್ರಾಬಲ್ಯಕ್ಕೆ ಸೋತ ಪಾಕಿಸ್ತಾನ, ಭಾರತ ಮತ್ತು ಬಾಂಗ್ಲಾದೇಶಕ್ಕೆ ಶರಣಾಯಿತು. ಡಿಸೆಂಬರ್ 16ರಂದು ವಿಜಯ್ ದಿವಸ್ ಆಚರಣೆಯನ್ನು ದೇಶಾದ್ಯಂತ ಮಾಡಲಾಗತ್ತಿದೆ. ಕರ್ನಾಟಕ ರಾಜ್ಯ ಕೋಸ್ಟ್‌ಗಾರ್ಡ್ ವತಿಯಿಂದಲೂ ವಿಜಯ್ ದಿವಸ್ ಆಚರಣೆ ಮಾಡಲಾಯಿತು. ಕಮಾಂಡರ್ ಡಿಐಜಿ ಎಸ್.ಎಸ್. ದಾಸಿಲಾ ಅವರು ಮಾತನಾಡಿ, ನಮ್ಮ ಮಹಾನ್ ರಾಷ್ಟ್ರಕ್ಕೆ ಹೊಸ ಇತಿಹಾಸವನ್ನು ಬರೆಯುವಲ್ಲಿ ಭಾರತೀಯ ಸಶಸ್ತ್ರ ಪಡೆಗಳ ಪಾತ್ರ ಮಹತ್ವದ್ದು ಎಂದು ಹೇಳಿದರು. ಬಳಿಕ ಹುತಾತ್ಮರಾದ ಭಾರತೀಯ ವೀರ ಯೋಧರಿಗೆ ನಮನ ಸಲ್ಲಿಸಿದರು.

 

Related posts

Leave a Reply

Your email address will not be published. Required fields are marked *