Header Ads
Header Ads
Breaking News

ರಾಜ್ಯಮಟ್ಟದ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್. ಹರ್ಡ್‌ಲ್ಸ್‌ನಲ್ಲಿ ನೀಲ್ ಆರ್. ಕುಂದರ್‌ಗೆ ಪ್ರಶಸ್ತಿ. ಹರ್ಡ್‌ಲ್ಸ್‌ನಲ್ಲಿ ಬೆಳ್ಳಿ ಪದಕ ಪಡೆದ ನೀಲ್. ಮೂಡುಬಿದರೆಯ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ ಸ್ಪರ್ಧೆ.

ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಶನ್ ಮತ್ತು ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಹರ್ಡ್‌ಲ್ಸ್‌ನಲ್ಲಿ ನೀಲ್ ಆರ್. ಕುಂದರ್ ಅವರು ಸಾಧನೆ ಮಾಡಿದ್ದಾರೆ.ಮೂಡುಬಿದರೆಯ ಸ್ವರಾಜ್ಯ ಮೈದಾನದಲ್ಲಿ ಮೂರು ದಿನಗಳ ಕಾಲ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ನಡೆಯುತ್ತಿದ್ದು, 16 ವರ್ಷದ ಬಾಲಕರ 100 ಮೀಟರ್ ಹರ್ಡ್‌ಲ್ಸ್‌ನಲ್ಲಿ ನೀಲ್ ಅರ್ ಕುಂದರ್ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.

ನೀಲ್ ಆರ್. ಕುಂದರ್ ಸಂತ ಅಲೋಶಿಯಸ್ ಫ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿಯಾಗಿದ್ದಾರೆ. ನೀಲ್ ಆರ್. ಕುಂದರ್ ದಿನೇಶ್ ಕುಂದರ್ ಅವರಲ್ಲಿ ತರಬೇತಿಯನ್ನು ಪಡೆಯುತ್ತಿದ್ದು, ರಾಜ್ ಕುಂದರ್ ಮತ್ತು ನಿಶಿ ರಾಜ್ ಕುಂದರ್ ದಂಪತಿಯ ಪುತ್ರ.

Related posts

Leave a Reply