Header Ads
Header Ads
Breaking News

ರಾಜ್ಯಮಟ್ಟದ ಕಿರಿಯರ ಮತ್ತು ಹಿರಿಯರ ಅಥ್ಲೆಟಿಕ್ಸ್ . ಸಾಧನೆ ಮಾಡುವ ಕ್ರೀಡಾಪಟುಗಳನ್ನು ಸರಕಾರ ಪ್ರೋತ್ಸಾಹಿಸಬೇಕು . ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವ ಹೇಳಿಕೆ.

ಮೂರು ದಿನಗಳ ಕಾಲ ನಡೆದ ಕರ್ನಾಟಕ ರಾಜ್ಯ ಜೂನಿಯರ್ ಮತ್ತು ಸೀನಿಯರ್ ಅತ್ಲೆಟಿಕ್ ಚಾಂಪಿಯನ್‌ಶಿಫ್-೨೦೧೮ ಸಮಾರೋಪ ಸಮಾರಂಭವು ಮೂಡಬಿದಿರೆಯ ಸ್ವರಾಜ್ಯ ಮೈದಾನದಲ್ಲಿ ನಡೆಯಿತು.ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಇಲ್ಲಿನ ಸರಕಾರ ನೀಡುವ ಪ್ರೋತ್ಸಾಹ ತೀರಾ ಕಡಿಮೆಯಾಗಿದೆ. ಆರ್ಥಿಕ ಸಮಸ್ಯೆಯಿರುವ ರಾಜ್ಯದ ಕ್ರೀಡಾಪಟುಗಳು ಅಂತರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ರಾಜ್ಯಮಟ್ಟದಲ್ಲು ಸಾಧನೆ ಮಾಡಿದ ಕ್ರೀಡಾಪಟುಗಳನ್ನು ಸರಕಾರವು ಹೆಚ್ಚಿ ನಗದು ಪುರಸ್ಕಾರ ನೀಡಿ ಪ್ರೋತ್ಸಾಹಿಸಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಅಳ್ವ ಸರಕಾರವನ್ನು ಆಗ್ರಹಿಸಿದರು.

ಒಂದೊಮ್ಮೆ ಯಾವುದೇ ಸಂದರ್ಭದಲ್ಲಿ ಅಥ್ಲೆಟಿಕ್ ಚಾಂಪಿಯನ್‌ಶಿಫ್ ಸಂಘಟಿಸಲು ಯಾವ ಸಂಘ ಸಂಸ್ಥೆಗಳು ಒಪ್ಪದೇ ಇದ್ದಲ್ಲಿ ಅಂತಹ ಸಂದರ್ಭದಲ್ಲಿ ಆಳ್ವಾಸ್ ಬಾಗಿಲು ನಿಮಗೆ ಸದಾ ತೆರದಿರುತ್ತದೆ ಎಂದು ಅವರು ಅಥ್ಲೆಟಿಕ್ ಅಸೋಸಿಯೇಶನ್ ಪದಾಧಿಕಾರಿಗಳಿಗೆ ಅಶ್ವಾಸನೆ ನೀಡಿದರು.ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದ ಮಂಗಳೂರು ವಿಶ್ವ ವಿದ್ಯಾನಿಲಯದ ಉಪಕುಲಪತಿ ಡಾ.ಕಿಶೋರ್ ಕುಮಾರ್ ಕ್ರೀಡಾಪಟುಗಳ ಸಾಧನೆಗೆ ತರಬೇತುದಾರರ ಪಾತ್ರ ಕೂಡ ದೊಡ್ಡದು. ಆದರೆ ಅನೇಕ ತರಬೇತುದಾರರಿಂದು ಸಂಕಷ್ಟದಲ್ಲಿದ್ದು ಅವರ ಸಂಕಷ್ಟಗಳಿಗೆ ಮೋಹನ ಆಳ್ವ ಸ್ಪಂದಿಸಿದರೆ ಅಂತಹ ತರಬೇತುದಾರರಿಂದ ಇನ್ನಷ್ಟು ಉತ್ತಮ ಸೇವೆಯನ್ನು ನಾವು ನಿರೀಕ್ಷಿಸಬಹುದು ಎಂದರು. ರಾಜ್ಯ ಅತ್ಲೆಟಿಕ್ ಅಸೋಸಿಯೇಶನ್ನಿನ ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ, ಕಾರ್ಯದಶರ್? ರಾಜುವೇಲು, ಹಿರಿಯ ಉಪಾಧ್ಯಕ್ಷ ಮಹಾವೇಲು, ಟೆಕ್ನಿಕಲ್ ವಿಭಾಗ ಸಮಿತಿ ಅಧ್ಯಕ್ಷ ಆನಂದ, ಅಂತರಾಷ್ಟ್ರೀಯ ಕ್ರೀಡಾಪಟು ಸೋಮಶೇಖರ್, ಕ್ರೀಡಾ ಉದ್ಘೋಷಕ ಬೆಂಗಳೂರಿನ ಸತೀಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply