Header Ads
Breaking News

ರಾಜ್ಯಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾಟ : ಉತ್ತಮ ಪ್ರದರ್ಶನ ನೀಡಿದ ಮಂಗಳೂರು ಬಾಸ್ಕಟ್‌ಬಾಲ್ ಕ್ಲಬ್ ತಂಡ

ಕರ್ನಾಟಕ ಬಾಸ್ಕೆಟ್ ಬಾಲ್ ಅಸೋಸಿಯೇಶನ್ ವತಿಯಿಂದ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಬಾಸ್ಕೆಟ್ ಬಾಲ್ ಪಂದ್ಯಾಟದಲ್ಲಿ ಮಂಗಳೂರು ಬಾಸ್ಕೆಟ್ ಬಾಲ್ ತಂಡವು ಉತ್ತಮ ಪ್ರದರ್ಶನ ನೀಡಿದೆ. ಈ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.
ಕರ್ನಾಟಕ ಬಾಸ್ಕೆಟ್ ಬಾಲ್ ಅಸೋಸಿಯೇಶನ್ ವತಿಯಿಂದ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ರಾಜ್ಯಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾಟ ನಡೆಯುತ್ತಿದೆ. ಪಂದ್ಯಾಟದಲ್ಲಿ ಮಂಗಳೂರಿನ ಬಾಸ್ಕೆಟ್ ಬಾಲ್ ಕ್ಲಬ್ ತಂಡವೂ ಪಾಲ್ಗೊಂಡಿದ್ದು, ಉತ್ತಮ ಪ್ರದರ್ಶನ ನೀಡಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ.

ಪಂದ್ಯಾಟದಲ್ಲಿ ಮೊದಲ ಪಂದ್ಯವು ಮಂಗಳೂರು ಬಾಸ್ಕೆಟ್ ಬಾಲ್ ಕ್ಲಬ್ ಮತ್ತು ವಿವೇಕ್ಸ್ ಬೆಂಗಳೂರು ತಂಡದ ನಡುವೆ ನಡೆಯಿತು. ಈ ಪಂದ್ಯಾಟದಲ್ಲಿ ಮಂಗಳೂರು ಬಾಸ್ಕೆಟ್ ಬಲ್ ಕ್ಲಬ್ ತಂಡವು 51-47 ಅಂಕಗಳ ಅಂತರದಲ್ಲಿ ವಿವೇಕ್ಸ್ ಬೆಂಗಳೂರು ತಂಡವನ್ನು ಮಣಿಸಿತು. ಎರಡನೇ ಪಂದ್ಯವು ಮಂಗಳೂರು ಬಾಸ್ಕೆಟ್ ಬಾಲ್ ಕ್ಲಬ್ ಹಾಗೂ ಎನ್‌ವಿಜಿ ಬೆಂಗಳೂರು ತಂಡಗಳ ನಡುವೆ ನಡೆಯಿತು. ಇದರಲ್ಲಿ ಮಂಗಳೂರು ಬಾಸ್ಕೆಟ್ ಬಾಲ್ ತಂಡವು 47-44ಅಂಕಗಳ ಅಂತರದಲ್ಲಿ ಎನ್‌ವಿಜಿ ಬೆಂಗಳೂರು ತಂಡವನ್ನು ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಇಂದು ಕ್ವಾರ್ಟ್‌ರ್ ಫೈನಲ್ ಪಂದ್ಯ ನಡೆಯಲಿದ್ದು, ಮಂಗಳೂರು ಬಾಸ್ಕೆಟ್ ಬಾಲ್ ಕ್ಲಬ್ ತಂಡವು ದೇವಾಂಗ ಬೆಂಗಳೂರು ತಂಡದ ವಿರುದ್ಧ ಸೆಣಸಲಿದೆ.

Related posts

Leave a Reply

Your email address will not be published. Required fields are marked *