Header Ads
Header Ads
Breaking News

ರಾಜ್ಯಮಟ್ಟದ ಮುಕ್ತ ’ಹಾಫ್ ಮ್ಯಾರಥಾನ್’ ಸ್ಪರ್ಧೆ : ಪ್ರೌಢಶಾಲಾ ಬಾಲಕ-ಬಾಲಕಿಯರ ಗುಡ್ಡಗಾಡು ಓಟ

ಉಚ್ಚಿಲ ಬೋವಿ ವಿದ್ಯಾ ಸಂಸ್ಥೆಗಳ ಶತಮಾನೋತ್ಸವ ಪ್ರಯುಕ್ತ “ಸಾಮರಸ್ಯದೆಡೆಗೆ ಓಟ” ಎಂಬ ಧ್ಯೇಯದೊಂದಿಗೆ ಪುರುಷರು ಮತ್ತು ಮಹಿಳೆಯರಿಗೆ ರಾಜ್ಯಮಟ್ಟದ ಮುಕ್ತ ‘ಹಾಫ್ ಮ್ಯಾರಥಾನ್ ಸ್ಪರ್ಧೆ’ ಹಾಗೂ ಪ್ರೌಢಶಾಲಾ ಬಾಲಕ-ಬಾಲಕಿಯರ ’ಗುಡ್ಡಗಾಡು ಓಟ’ಕ್ಕೆ ಚಾಲನೆ ನೀಡಲಾಯಿತು.

ಮೂರೂರು ಬೋವಿ ಮಹಾಸಭಾದ ಅಧ್ಯಕ್ಷ ಚಿದಾನಂದ ಆರ್.ಉಚ್ಚಿಲ್ ರಾಜ್ಯಮಟ್ಟದ ಮುಕ್ತ ‘ಹಾಫ್ ಮ್ಯಾರಥಾನ್ ‘ಸ್ಪರ್ಧೆಗೆ ಚಾಲನೆ ನೀಡಿದರು. ನಂತರ ಮಾತನಾಡಿ ಕ್ರೀಡಾಪಟುಗಳು ಒಳ್ಳೆಯ ಸ್ಥಾನ ಗಳಿಸುವ ಪ್ರಯತ್ನ ಮಾಡಿದಂತೆ ಜೀವನದಲ್ಲೂ ಉತ್ತಮ ಸ್ಥಾನ ಪಡೆಯುವಂತಾಗಲು ಪ್ರಯತ್ನ ನಡೆಸಬೇಕು ಎಂದು ಅಭಿಪ್ರಾಯಪಟ್ಟರು. ರಾಷ್ಟ್ರೀಯ ಕ್ರೀಡಾಪಟು ನಾಗೇಶ್ ಎಸ್. ಉಚ್ಚಿಲ್ ಚಾಲನೆ ನೀಡಿದರು. ಶಾಸಕ ಯು.ಟಿ.ಖಾದರ್ ಗುಡ್ಡಗಾಡು ಓಟಕ್ಕೆ ಚಾಲನೆ ನೀಡಿದರು.
ರಾಜ್ಯಮಟ್ಟದ ಫುಟ್ಬಾಲ್ ತರಬೇತುದಾರ ಉಮೇಶ್ ಉಚ್ಚಿಲ್ ಮಾತನಾಡಿ, ಏಳು ದಶಕಗಳ ಹಿಂದೆ ರಾಷ್ಟ್ರೀಯ, ಅಂತರಾಷ್ಟ್ರೀಯ ಕ್ರೀಡಾಪಟುಗಳನ್ನು ಸೃಷ್ಟಿಸಿದ ನೆಲವಾಗಿರುವ ಉಚ್ಚಿಲದಲ್ಲಿ ನಡೆಯುತ್ತಿರುವ ಹಾಫ್ ಮ್ಯಾರಥಾನ್ ನಡೆಯುತ್ತಿದೆ. ಕ್ರೀಡೆಯನ್ನು ಬೆಳೆಸುವ ನಿಟ್ಟಿನಲ್ಲಿ ಮತ್ತೆ ಕ್ರೀಡಾಕೂಟ ನಗರ ನಡೆಸಲಾಗುತ್ತಿದೆ ಎಂದರು. ತಾಲೂಕು ಪಂಚಾಯಿತಿ ಸದಸ್ಯೆ ಸುರೇಖ ಚಂದ್ರಹಾಸ, ಉಚ್ಚಿಲ ಬೋವಿ ಶಾಲಾ ಸಂಚಾಲಕ ದೇವದಾಸ್ ಟಿ.ಉಚ್ಚಿಲ್, ಕ್ರೀಡಾ ಸಂಚಾಲಕ ಚಂದ್ರಶೇಖರ ಎಸ್.ಉಚ್ಚಿಲ್, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ವಿಷ್ಣು ಹೆಬ್ಬಾರ್ ಉಪಸ್ಥಿತರಿದ್ದರುಹೆಬ್ಬಾರ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *