Header Ads
Header Ads
Breaking News

ರಾಜ್ಯಮಟ್ಟದ ರಸ್ಲಿಂಗ್ ಚಾಂಪಿಯನ್‌ಶಿಪ್:ದ.ಕ. ಜಿಲ್ಲಾ ಪುರುಷರ ಮತ್ತು ಮಹಿಳೆಯರ ಆಯ್ಕೆ

ಮೈಸೂರು ದಸರಾದ ಪ್ರಯುಕ್ತ ರಾಜ್ಯ ಮಟ್ಟದ ರೆಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲು ದಕ್ಷಿಣ ಕನ್ನಡ ಜಿಲ್ಲಾ ಪುರುಷರ ಮತ್ತು ಮಹಿಳಾ ಕುಸ್ತಿ ತಂಡಕ್ಕೆ ಆಯ್ಕೆ ಪ್ರಕ್ರಿಯೆ ಮಂಗಳಾ ಸ್ಟೇಡಿಯಂನಲ್ಲಿ ನಡೆಯಿತು.ದಸರಾದ ಪ್ರಯುಕ್ತ ಕುಸ್ತಿ ಪಂದ್ಯಾಟಕ್ಕೆ ಭಾಗವಹಿಸಲು ದಕ್ಷಿಣ ಕನ್ನಡ ಜಿಲ್ಲೆಯಿಂದ ಕುಸ್ತಿಪಟುಗಳು ಪ್ರತಿನಿಧಿಸುತ್ತಿದ್ದಾರೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಕುಸ್ತಿ ಅಸೋಸಿಯೇಶನ್‌ನ ಅಧ್ಯಕ್ಷರಾದ ಪ್ರಕಾಶ್ ವಿ ಕರ್ಕೆರಾ ಅವರು ಮಾತನಾಡಿ, ಮೈಸೂರು ದಸರಾ ಅಂಗವಾಗಿ ಮಂಗಳೂರಿನಲ್ಲಿ ಕುಸ್ತಿ ಸ್ಪರ್ಧೆಗಳ ಆಯ್ಕೆ ಪ್ರಕ್ರಿಯೆ ನಡೆಯಿತು.

ಇದರಲ್ಲಿ ಅವಿಭಜಿತ ಜಿಲ್ಲೆಯ ಕುಸ್ತಿಪಟುಗಳು ಮತ್ತು ವಿಶೇಷವಾಗಿ ಆಳ್ವಾಸ್ ಕಾಲೇಜಿನ ಕುಸ್ತಿಪಟುಗಳು ಸ್ಪರ್ಧಿಸಿ ವಿಜಯದ ಪತಾಕೆಯನ್ನು ಹಾರಿಸಲಿದ್ದಾರೆ ಎಂದು ಹೇಳಿದರು.ಆನಂತರ ಆಳ್ವಾಸ್‌ನ ಕುಸ್ತಿಪಟು ಲಕ್ಷ್ಮೀ ಮಾತನಾಡಿ, ಈ ಬಾರಿ ಕುಸ್ತಿಯಲ್ಲಿ ಸ್ಪರ್ಧಿಸಲು ಆಯ್ಕೆಯಾಗಿದ್ದೇವೆ. ಉತ್ತಮ ಮಟ್ಟದ ಪ್ರದರ್ಶನ ನೀಡಲಾಗವುದು ಎಂದು ಹೇಳಿದರು.ಇದೇ ವೇಳೆ ಜಿಲ್ಲೆಯ ವಿವಿಧ ವ್ಯಾಯಾಮ ಶಾಲೆಯ ಕುಸ್ತಿಪಟುಗಳ ಆಯ್ಕೆ ನಡೆಯಿತು.ಈ ಸಂದರ್ಭ ಮ್ಯಾಟ್ ರೆಫ್ರಿ ಸತೀಶ್ ಬೆಂಗ್ರೆ, ಜೊತೆ ಕಾರ್ಯದರ್ಶಿ ನವೀದ್ ಇರ್ಶಾದ್, ವಿಜಯ್ ಪುತ್ರನ್, ಕಾರ್ಯದರ್ಶಿ ಸಂದೀಪ್ ಎಸ್. ರಾವ್, ಕಮಿಟಿ ಸದಸ್ಯರಾದ ಶಿವರಾಜ್ ಉಪಸ್ಥಿತರಿದ್ದರು.

Related posts

Leave a Reply