Header Ads
Header Ads
Header Ads
Breaking News

ರಾಜ್ಯಮಟ್ಟದ 17 ವಯೋಮಿತಿಯ ಪ್ರೌಢಶಾಲಾ ಅಥ್ಲೆಟಿಕ್ಸ್ ಕ್ರೀಡಾಕೂಟ ಮೂಡುಬಿದಿರೆಯ ಆಳ್ವಾಸ್ ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ಅಥ್ಲೆಟಿಕ್ಸ್

 ಬೆಳಗಾವಿ ಜಿಲ್ಲಾಡಳಿತ ಹಾಗೂ ಬೆಳಗಾವಿ ಜಿಲ್ಲಾ ಪಂಚಾಯಿತಿ ವತಿಯಿಂದ ಅಕ್ಟೋಬರ್ 16 ರಿಂದ 18ರವರೆಗೆ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯಮಟ್ಟದ 17ವಯೋಮಿತಿಯ ಪ್ರೌಢಶಾಲಾ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡವನ್ನು ಪ್ರತಿನಿಧಿಸಿದ ಆಳ್ವಾಸ್ ಪ್ರೌಢಶಾಲೆ ಮೂಡುಬಿದಿರೆ ವಿದ್ಯಾರ್ಥಿಗಳು ಒಟ್ಟು 17 ಚಿನ್ನ, 08 ಬೆಳ್ಳಿ ಹಾಗೂ 14 ಕಂಚಿನ ಪದಕಗಳನ್ನು ಪಡೆದು ಒಟ್ಟು 29 ಪದಕವನ್ನು ತನ್ನದಾಗಿಸಿಕೊಂಡಿದ್ದಾರೆ. ಅಲ್ಲದೇ 4 ನೂತನ ಕೂಟ ದಾಖಲೆಗಳನ್ನು ಮಾಡಿರುತ್ತಾರೆ.17 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ನಾಗೇಂದ್ರ ಅಣ್ಣಪ್ಪ ನಾಯಕ್ ಅವ್ರು ಚಕ್ರ ಎಸೆತ , ರಿನ್ಸ್ ಜೋಸೆಫ್ ಅವ್ರು 400ಮೀಟರ್ ಓಟ, ಗೋಪಾಲಕೃಷ್ಣ ಪೋಲ್‌ವಾಲ್ಟ್, ಅಜಿತ್ ಎ. ಎತ್ತರ ಜಿಗಿತದಲ್ಲಿ ನೂತನ ಕೂಟ ದಾಖಲೆ ನಿರ್ಮಿಸಿದ್ದಾರೆ.ಆಳ್ವಾಸ್ ಪ್ರೌಢಶಾಲೆಯಿಂದ 17 ಜನ ಕ್ರೀಡಾಪಟುಗಳು ಮುಂದಿನ ನವೆಂಬರ್‌ನಲ್ಲಿ ಭೋಪಾಲ್‌ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಕೂಲ್ ಗೇಮ್ಸ್ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ನಮ್ಮ ಕರ್ನಾಟಕ ರಾಜ್ಯ ತಂಡದಲ್ಲಿ ಅತಿ ಹೆಚ್ಚು ಕ್ರೀಡಾಪಟುಗಳು ಆಳ್ವಾಸ್ ಪ್ರೌಢಶಾಲೆಯಿಂದ ಪ್ರತಿನಿಧಿಸಲಿದ್ದಾರೆ.

Related posts

Leave a Reply