Header Ads
Header Ads
Breaking News

ರಾಜ್ಯಾದ್ಯಂತ ಸಂಚರಿಸುತ್ತಿರುವ ಟೀಮ್ ಮೋದಿ ರಥಯಾತ್ರೆ : ಸುಳ್ಯದಿಂದ ಪುತ್ತೂರಿಗೆ ಅಗಮಿಸಿದ ರಥಯಾತ್ರೆ

ಪುತ್ತೂರು: ಟೀಮ್ ಮೋದಿ ರಥಯಾತ್ರೆಯು ರಾಜ್ಯಾದ್ಯಂತ ಸಂಚರಿಸಿ ಫೆ.೧೩ ರಂದು ಆಗಮಿಸಿತು. ಇಂದು ಸುಳ್ಯದಿಂದ ಬಂದ ರಥವು ಪುತ್ತೂರಿನ ದರ್ಬೆಯಿಂದ ಸ್ವಾಗತಿಸಲಾಯಿತು. ಬಳಿಕ ನೆಹರೂನಗರದಲ್ಲಿ ನರೇಂದ್ರ ಮೋದಿ ಅವರ ಸಾಧನೆಗಳನ್ನು ವಿಡಿಯೋ ಪ್ರದರ್ಶನದ ಮೂಲಕ ಅಲ್ಲಿನ ಜನತೆಗೆ ಪ್ರದರ್ಶಿಸಿದರು. ನಂತರ ಮೋದಿ ಅವರ ಪ್ರತಿಮೆಗೆ ಪುಷ್ಪರ್ಚನೆ ಮಾಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ನಗರ ಮಂಡಲ ಅಧ್ಯಕ್ಷ ಜೀವಂಧರ್ ಜೈನ್, ನಗರಸಭಾ ಸದಸ್ಯರಾದ ಗೌರಿ ಬನ್ನೂರು, ವಿದ್ಯಾಗೌರಿ, ಭಾಮಿ ಅಶೋಕ್ ಶೆಣೈ, ವೈದ್ಯ ಸುರೇಶ್ ಪುತ್ತೂರಾಯ, ಕಿರಣ್ ಶಂಕರ್ ಮಲ್ಯ, ಟೀಮ್ ಮೋದಿಯ ದಿನೇಶ್ ಜೈನ್, ವಿನೋದ್ ಆಚಾರ್ಯ ಹಾಗೂ ಮತ್ತಿತರರು ಭಾಗವಹಿಸಿದರು.

Related posts

Leave a Reply

Your email address will not be published. Required fields are marked *