Header Ads
Header Ads
Header Ads
Breaking News

ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯ ಸೆ.11ರಂದು ಹೆಜಮಾಡಿಯಿಂದ ಕಾಪುವಿನವರೆಗೆ ಪಾದಯಾತ್ರೆ ಬಿಜೆಪಿ ಹಿಂದುಳಿದ ಮೋರ್ಚಾದ ನೇತೃತ್ವದಲ್ಲಿ ಆಂiಜನೆ

 

ರಾಜ್ಯ ಕಾಂಗ್ರೆಸ್ ಸರಕಾರದ ವೈಫಲ್ಯಗಳನ್ನು ಜನತೆಗೆ ತಲುಪಿಸಲು ಸೆ. ೧೧ರಂದು ಹೆಜಮಾಡಿಯಿಂದ ಕಾಪುವಿನವರೆಗೆ ಬಿಜೆಪಿ ಹಿಂದುಳಿದ ಮೋರ್ಚಾದ ನೇತೃತ್ವದಲ್ಲಿ ಕಾರ್ಯಕರ್ತರ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ, ರಾಜ್ಯ ಬಿಜೆಪಿ ಹಿಂದುಳಿದ ಮೋರ್ಚಾ ಅಧ್ಯಕ್ಷ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಅವರು ಪಡುಬಿದ್ರಿಯಲ್ಲಿ ನಡೆದ ಬಿಜೆಪಿ ಶಕ್ತಿಕೇಂದ್ರದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಉಡುಪಿ ಜಿಲ್ಲೆಯಲ್ಲಿ ೧೦೫೦೦ ಮಂದಿ ೯೪ ಸಿ ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದಾರೆ. ಅವರಿಗೆ ತಮ್ಮ ಗೇಣು ಭೂಮಿಯನ್ನು ದಕ್ಕಿಸಿಕೊಳ್ಳುವ ಭಾಗ್ಯ ಇನ್ನೂ ಬಂದಿಲ್ಲ. ಕಾಪು ಶಾಸಕ ವಿನಯಕುಮಾರ್ ಸೊರಕೆ ಜನಸಂಪರ್ಕ ಸಂಪರ್ಕಗಳನ್ನು ನಡೆಸಿ ಹಂಚಿರುವುದು ಕೇವಲ ೪೫೦ ಹಕ್ಕುಪತ್ರಗಳನ್ನು ಮಾತ್ರವಾಗಿದೆ. ಧಾರ್ಮಿಕದತ್ತಿ ಸಚಿವನಾಗಿದ್ದ ವೇಳೆ ತಾನು ಉಡುಪಿ ಜಿಲ್ಲೆಗೆ ೨೧ಕೋಟಿ ರೂ. ಗಳನ್ನು ದೇವಳಗಳಿಗೆ ಹಂಚಿದ್ದೇನೆ. ಈಗಿನ ಸಚಿವರಿಗಾಗಲೀ, ಮಾಜಿ ಸಚಿವರಿಗಾಗಲೀ ಒಂದು ಕೋಟಿ ರೂ. ಗಳನ್ನೂ ತರಲು ಸಾಧ್ಯವಾಗಿಲ್ಲ. ಹಾಗಾಗಿ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರಕಾರವು ಹೇಳುವುದೊಂದು. ಮಾಡುವುದೇನಿಲ್ಲ. ಜಿಲ್ಲೆಯ ಮರಳು ಸಮಸ್ಯೆಗೆ ಪರಿಹಾರ ಅವರಿಂದ ಸಾಧ್ಯವಾಗಿಲ್ಲ. ಅಂಗನವಾಡಿಯಲ್ಲಿನ ನಮ್ಮ ಪುಟಾಣಿಗಳಿಗೆ ಮೊಟ್ಟೆಯೇ ಬಂದಿಲ್ಲ. ವಾಸ್ತವ ಸ್ಥಿತಿ ಇದು ಎಂಬುದಾಗಿ ಶಾಸಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಸಭೆಯನ್ನು ಉದ್ದೇಶಿಸಿ ಮಾಜಿ ಶಾಸಕ ಲಾಲಾಜಿ ಮೆಂಡನ್ ಮಾತನಾಡಿ, ಈಗ ಆಡಳಿತ ರೂಡಾ ಕಾಂಗ್ರೆಸ್ ಸರಕಾರವು ಅತ್ಯಂತ ಕೆಟ್ಟ ಹಾಗೂ ಭ್ರಷ್ಠ ಸರಕಾರವಾಗಿದೆ. ಈ ಹಿಂದೆ ಆಡಳತ ನಡೆಸಿದ್ದ ಯಡಿಯೂರಪ್ಪ, ಸದಾನಂದ ಗೌಡ, ಶೆಟ್ಟರ್‌ರವರ ಬಿಜೆಪಿ ಸರಕಾರವು ಕರ್ನಾಟಕದ ಸುವರ್ಣ ಯುಗ ಎಂದಿದ್ದಾರೆ.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ ಮಾತನಾಡಿ, ನಮ್ಮ ಒಂದು ದೂರವಾಣಿ ಕರೆಗೆ ನೂರಾರು ಸಂಖ್ಯೆಯ ಕಾರ್ಯಕರ್ತರು ಬಂದಿದ್ದೀರಿ ಅದು ಹೆಮ್ಮೆಯ ವಿಷಯ. ಕಾರ್ಯಕರ್ತರು ನಮ್ಮ ಜೀವಾಳ. ಹಾಗಾಗಿ ಮುಂದಿನ ವಿಧಾನ ಸಭಾ ಚುನಾವಣೆ ಮತ್ತು ಬಿಜೆಪಿ ಸರಕಾರಗಳ ಗುರಿ ತಲುಪಲು ನಾವು ಹೋರಾಡಬೇಕಿದೆ. ೧೬ ಕಿಮೀಗಳ ಪಾದಯಾತ್ರೆಗೆ ೧೫೦೦ಸಾವಿರ ಕಾರ್ಯಕರ್ತರ ಗುರಿ ನಮ್ಮದಾಗಿರಲಿ ಎಂದರು.

ಸಭೆಯಲ್ಲಿ ಜಿಲ್ಲಾ ಬಿಜೆಪಿ ಹಿಂದುಳಿದ ಮೋರ್ಚಾ ಅಧ್ಯಕ್ಷ ರಾಜೇಶ್ ಕಾವೇರಿ, ಪಡುಬಿದ್ರಿ ಬಿಜೆಪಿ ಶಕ್ತಿಕೇಂದ್ರದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯ್ಕ್, ಕಾಪು ಮಂಡಲಾಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಜಿ. ಪಂ. ಉಪಾಧ್ಯಕ್ಷೆ ಶೀಲಾ ಶೆಟ್ಟಿ, ಬಿಜೆಪಿ ನಾಯಕರಾದ ಜಿ. ಪಂ. ಸದಸ್ಯ ಶಶಿಕಾಂತ್ ಪಡುಬಿದ್ರಿ, ತಾ. ಪಂ. ಸದಸ್ಯರಾದ ನೀತಾ ಗುರುರಾಜ್, ಕೇಶವ ಮೊಯಿಲಿ, ಶ್ಯಾಮಲಾ ಕುಂದರ್, ಯಶ್‌ಪಾಲ್ ಸುವರ್ಣ, ರಮಾಕಾಂತ ದೇವಾಡಿಗ, ಸಂದೇಶ್, ಬಾಲಕೃಷ್ಣ ದೇವಾಡಿಗ, ಶರಣ್ ಹೆಜಮಾಡಿ, ಪ್ರಾಣೇಶ್ ಹೆಜಮಾಡಿ ಮತ್ತಿತರರಿದ್ದರು.

Related posts

Leave a Reply