Header Ads
Header Ads
Breaking News

ರಾಜ್ಯ ಮಟ್ಟದ ಯುವಜನೋತ್ಸವ ನ.30 ರಿಂದ ಡಿ.2ರ ತನಕ ನಡೆಯುವ ಕಾರ್ಯಕ್ರಮ ಉಡುಪಿಯ ಅಜ್ಜರಕಾಡು ಕ್ರೀಡಾಂಗಣದಲ್ಲಿ ಆಯೋಜನೆ ಸಚಿವ ಪ್ರಮೋದ್ ಮಧ್ವರಾಜ್ ಮಾಹಿತಿ

ಜಿಲ್ಲಾಡಳಿತ, ಜಿ.ಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಇದರ ಸಂಯುಕ್ತ ಆಶ್ರಯದಲ್ಲಿ ನ. 30 ರಿಂದ ಡಿ ೨ರತನಕ ಉಡುಪಿ ಅಜ್ಜರಕಾಡು ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ ನಡೆಯಲಿದೆ.

ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನಿಡಿದ ಯುವಜನಸೇವೆ ಹಾಗೂ ಕ್ರೀಡಾ ಮಂತ್ರಿ ಪ್ರಮೋದ್ ಮದ್ವರಾಜ್ ರಾಜ್ಯಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ 15  ವರ್ಷ ದಿಂದ 29 ವರ್ಷದ ಯುವಕ ಯುವತಿಯರಿಗೆ ಜನಪದ ನೃತ್ಯ, ಜನಪದ ಹಾಡು, ಏಕಾಂಕ ನಾಟಕ, ಆಶುಭಾಷಣ, ಶಾಸ್ತ್ರೀಯ ನೃತ್ಯ, ಶಾಸ್ತ್ರೀಯ ಗಾಯನ, ಶಾಸ್ತ್ರೀಯ ವಾದನ, ಹಾರ್ಮೋನಿಯಂ, ಗಿಟಾರ್ ವಾದನ ಸ್ಪರ್ದೆಗಳು ನಡೆಯಲಿವೆ. ರಾಜ್ಯದ 30 ಜಿಲ್ಲೆಯ 1500 ಕ್ಕೂ ಅಧಿಕ ಹೆಚ್ಚು ಸ್ಪರ್ದಾಳುಗಳು ಹಾಗೂ ತಂಡ ವ್ಯವಸ್ಥಾಪಕರು ಭಾಗವಹಿಸಲಿದ್ದಾರೆ. ನ. 30 ರಂದು ಸಂಜೆ 6 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ ಎಂದರು.

Related posts