Header Ads
Breaking News

ರಾಜ್ಯ ಮಟ್ಟದ ಸಬ್‌ಜೂನಿಯರ್ ಬಾಲ್ ಬ್ಯಾಡ್ಮಿಂಟನ್ : ಮೂಡುಬಿದರೆಯ ಆಳ್ವಾಸ್‌ಗೆ ಅವಳಿ ಪ್ರಶಸ್ತಿ

ಬಾಲ್ ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಕರ್ನಾಟಕ ಹಾಗೂ ಬೆಂಗಳೂರು ಜಿಲ್ಲಾ ಬಾಲ್ ಬ್ಯಾಡ್ಮಿಂಟನ್ ಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನ ರಾಜೇಶ್ವರಿ ವಿದ್ಯಾಶಾಲೆಯ ಆಶ್ರಯದಲ್ಲಿ ಭಾನುವಾರ ಮುಕ್ತಾಯಗೊಂಡ 39ನೇ ರಾಜ್ಯ ಸಬ್ ಜೂನಿಯರ್ ಬಾಲ್ ಬ್ಯಾಡ್ಮಿಂಟನ್ ಲೀಗ್ ಚಾಂಪಿಯನ್‍ಶಿಪ್‍ನಲ್ಲಿ ಮೂಡಬಿದ್ರಿಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಬಾಲಕ ಮತ್ತು ಬಾಲಕಿಯರ ತಂಡಗಳು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.ಲೀಗ್ ಹಾಗೂ ನಾಕೌಟ್ ಮಾದರಿಯಲ್ಲಿ ಜರುಗಿದ ಪಂದ್ಯಾವಳಿಯಲ್ಲಿ ರಾಜ್ಯದ 24 ಬಾಲಕರ ಹಾಗೂ 20 ಬಾಲಕಿಯರ ತಂಡಗಳು ಭಾಗವಹಿಸಿದ್ದವು. ಬಾಲಕರ ವಿಭಾಗದ ಫೈನಲ್ಸ್‍ನಲ್ಲಿ ಆಳ್ವಾಸ್ ತಂಡ ಚಿಂತಾಮಣಿ ಬಿಬಿಸಿ ತಂಡವನ್ನು 35-33, 28-35, 35-33 ಅಂಕಗಳಿಂದ ಮಣಿಸಿ ಪ್ರಶಸ್ತಿಯನ್ನು ಪಡೆದುಕೊಡಿತು. ಸೆಮಿಫೈನಲ್‍ನಲ್ಲಿ ಆಳ್ವಾಸ್ ತಂಡ ಸ್ವರ್ಣಾಂಬ ತಂಡವನ್ನು, ಚಿಂತಾಮಣಿ ತಂಡ ಶ್ರೀ ರಾಜೇಶ್ವರಿ ಯೂತ್ ಕ್ಲಬ್ ತಂಡವನ್ನು ಸೋಲಿಸಿತ್ತು. ಬಾಲಕಿಯರ ವಿಭಾಗದ ಫೈನಲ್ಸ್‍ನಲ್ಲಿ ಆಳ್ವಾಸ್ ತಂಡ ಸ್ವರ್ಣಾಂಬ ಹೊನ್ನುಡಿಕೆ ತಂಡವನ್ನು 35-30, 35-21 ರ ನೇರ ಸೆಟ್‍ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಪಡೆದುಕೊಂಡಿತು. ಸೆಮಿಫೈನಲ್‍ನಲ್ಲಿ ಆಳ್ವಾಸ್ ತಂಡ ಮಾಕವಳ್ಳಿ ತಂಡವನ್ನು, ಸ್ವರ್ಣಾಂಬ ಹೊನ್ನುಡಿಕೆ ತಂಡ ಅರಕಲಗೂಡು ತಂಡವನ್ನು ಸೋಲಿಸಿತ್ತು.ಬಾಲಕರ ವಿಭಾಗದಲ್ಲಿ ಚಿಂತಾಮಣಿ ತಂಡದ ಧೀರಜ್ ರೆಡ್ಡಿ ಹಾಗೂ ಬಾಲಕಿಯರ ವಿಭಾಗದಲ್ಲಿ ಆಳ್ವಾಸ್ ತಂಡದ ಪ್ರಿಯಾ..ಬಿ.ಜಿ. ಅತ್ಯುತ್ತಮ ಆಟಗಾರ ಹಾಗೂ ಆಟಗಾರ್ತಿ ಪ್ರಶಸ್ತಿಯನ್ನು ಪಡೆದುಕೊಂಡರು. ಆಳ್ವಾಸ್ ಮಕ್ಕಳ ಈ ಸಾಧನೆಗೆ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ.ಮೋಹನ್ ಆಳ್ವರವರು ಅಭಿನಂದನೆ ಸಲ್ಲಿಸಿದ್ದಾರೆ.

Related posts

Leave a Reply

Your email address will not be published. Required fields are marked *