Header Ads
Header Ads
Header Ads
Breaking News

ರಾಜ್ಯ ಮಹಾಮಂಡಳ ಅಧ್ಯಕ್ಷರಾಗಿ ಡಾ. ರಾಜೇಂದ್ರ ಕುಮಾರ್ ಹುಟ್ಟೂರಲ್ಲಿ ಅಭಿನಂದನಾ ಸನ್ಮಾನ ಬಾಹುಬಲಿ ಪ್ರವಚನ ಮಂದಿರದಲ್ಲಿ ಕಾರ್ಯಕ್ರಮ

ಕಾರ್ಕಳ: ಕರ್ನಾಟಕ ರಾಜ್ಯ ಸರ್ಕಾರ ಮಹಾಮಂಡಳ ಬೆಂಗಳೂರು ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಾ| ಎಮ್. ಎನ್ ರಾಜೇಂದ್ರ ಕುಮಾರ್ ರವರಿಗೆ ಹುಟ್ಟಿರಿನಲ್ಲಿ ಸನ್ಮಾನ ಕಾರ್ಯಕ್ರಮ ಬಾಹುಬಲಿ ಪ್ರವಚನ ಮಂದಿರದಲ್ಲಿ ಜರಗಿತು.


ಈ ಸಂದರ್ಭದಲ್ಲಿ ಅಬೂತ ಪೂರ್ವ ಶೋಭಾ ಯಾತ್ರೆ ಮೂಲಕ ಎಮ್. ಎನ್ ರಾಜೇಂದ್ರ ಕುಮಾರ್‌ರಿಗೆ ವೇದಿಕೆಗೆ ಕರೆತರಲಾಯಿತು. ಅಭಿನಂದನಾ ಪತ್ರ ಹಾಗೂ ಶಾಲು ಫಲ ಪುಷ್ಪವನ್ನು ರಾಜೇಂದ್ರ ಕುಮರ್ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಇವರಾದ ಪ್ರಮೋದ್ ಮಧ್ವರಾಜ್ ಮಾತನಾಡಿ ಸಹಕಾರಿ ಸಂಘಗಳಲ್ಲಿ ಗೆದ್ದುಬರುವುದು ಸುಲಭದ ಮಾತಲ. ಎಲ್ಲಾ ಸಹಕಾರಿ ಅಧ್ಯಕ್ಷರ ಮನ ಒಲಿಸಿ ಅವರ ಮನಸ್ಸನ್ನು ಗೆದ್ದು ಬಂದು ಮಹಾ ಮಂಡಳಿಯ ಅಧ್ಯಕ್ಷರಾಗಿ ಎಮ್ .ಎನ್ ರಾಜೇಂದ್ರ ಕುಮಾರ್ ಮೂಡಿ ಬಂದಿದ್ದಾರೆ‌ಎಂದರು.


ಅಭಿನಂದಿಸಲ್ಪಟ್ಟ ಎಮ್ ಎನ್ ರಾಜೇಂದ್ರ ಕುಮಾರ್ ಮಾತನಾಡಿ ನಮ್ಮ ಸಮಾಜ ಬೆಳೆಯಬೇಕು ಹಾಗೂ ಸಮಾಜ ಬೆಳಗಿಸಬೇಕು. ಜಾತಿ ಬಲ, ಧನ ಬಲ, ತೋಳು ಬಲ ಇದ್ದರೆ ಮಾತ್ರ ಇವತ್ತಿನ ಕಾಲದ ವಿದ್ಯೆ ಪಡೆಯಬಹುದು ಎಂದು ಹೇಳಿದರು. ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಶ್ರೀ ವಿ. ಸುನೀಲ್ ಕುಮಾರ್, ಡಾ. ಎಂ ಮೋಹನ್ ಆಳ್ವ, ಶ್ರೀ ಹೆಚ್ ಗೋಪಾಳ ಭಂಢಾರಿ, ಶ್ರೀ ಎಂ ಕೆ ವಿಜಯ ಕುಮಾರ್ ಉಪಸ್ಥಿತರಿದ್ದರು.

ವರದಿ: ಖಲೀಲ್ ಕಾರ್ಕಳ

Related posts

Leave a Reply