Header Ads
Header Ads
Breaking News

ರಾಜ್ಯ ವಿಧಾನಸಭೆ ಚುನಾವಣೆ ಕುತೂಹಲ ಕೆರಳಿಸುತ್ತಿರುವ ದ.ಕ. ಜಿಲ್ಲೆ ಮೂಡಬಿದರೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಸವಾಲಾಗಿ ಸ್ಪರ್ಧೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಅಶ್ವಿನ್ ಜೆ. ಪಿರೇರಾ

ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿದೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯ ಮೇಲೆ ಎಲ್ಲರ ಕುತೂಹಲ ನೆಟ್ಟಿದೆ. ಯಾಕೆಂದರೆ ಜೈನಕಾಶಿ, ಶಿಕ್ಷಣ ಕಾಶಿ ಎಂದೇ ಹೆಸರು ಗಳಿಸಿರುವ ಮೂಡಬಿದ್ರೆ ವಿಧಾನಸಭಾ ಕ್ಷೇತ್ರ ತನ್ನದೇ ಆದ ಮಹತ್ವವನ್ನ ಹೊಂದಿದೆ. ಈ ಸಲದ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಕ್ಷೇತ್ರದಿಂದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ.

ಇವರಿಗೆ ಸವಾಲಾಗಿ ಇವರ ವಿರುದ್ದ ಪಕ್ಷೇತರರಾಗಿ ಯುವಕರೊಬ್ಬರು ಸ್ಪರ್ಧಿಸುತ್ತಿದ್ದಾರೆ. ಹಾಗಾದರೆ ಅವರು ಯಾರು ಗೊತ್ತಾ? ಅವರೇ ಉದ್ಯಮಿ ಯುವ ನಾಯಕ ಅಶ್ವಿನ್ ಜೊಸ್ಸಿ ಪಿರೇರಾ.ಕಳೆದ 12 ವರ್ಷಗಳ ಕಾಲ ಜೆಡಿಎಸ್ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತನಾಗಿ ದುಡಿದ ಯುವ ನಾಯಕ, ಉದ್ಯಮಿ ಅಶ್ವಿನ್ ಪಿರೇರಾಗೆ ಈ ಬಾರಿ ಜೆಡಿಎಸ್ ನಿಂದ ಟಿಕೆಟ್ ಖಚಿತ ಅಗಿತ್ತು. ಅದ್ರೆ ಮೂಡಬಿದ್ರೆ ಜೆಡಿಎಸ್ ನ ಹಿರಿಯ ಮುಖಂಡ ಹಾಗೂ ಮಾಜಿ ಸಚಿವರೊಬ್ಬರ ಒಳರಾಜಕೀಯದಿಂದ ಟಿಕೆಟ್ ಕೈತಪ್ಪಿತ್ತು . ಈ ಹಿನ್ನೆಲೆಯಲ್ಲಿ ಅಶ್ವಿನ್ ಪಿರೇರಾ ಸಾಮಾಜಿಕ ಸೇವೆ ಮಾಡಬೇಕೆಂಬ ಆಶಯದಡಿಯಲ್ಲಿ ಪಕ್ಷೇತರಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಜಾತಿ,ಮತ, ಧರ್ಮಗಳೆಂಬ ಎಲ್ಲೆ ಮಿರಿ ಜನಸೇವೆಯಲ್ಲಿ ತೊಡಗಿಸಿಕೊಂಡಿರುವ ಕ್ರಿಯಾಶೀಲ ಯುವ ನಾಯಕ ಅಶ್ವಿನ್ ಜೊಸ್ಸಿ ಪಿರೇರಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ ಮೂಡಬಿದ್ರೆ ಕ್ಷೇತ್ರದ ಜನರು ಈಗಾಗಲೇ ಬೆಂಬಲ ವ್ಯಕ್ತಪಡಿಸಿದ್ದಾರೆ. ಜೊತೆಗೆ ಕ್ಯಾಥೊಲಿಕ್ ಸಮುದಾಯ ಕೂಡಾ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. ಪಕ್ಷೇತರ ಅಭ್ಯರ್ಥಿ ಪಿರೇರಾರ ಪ್ರಣಾಳಿಕೆಯ ಅಂಶಗಳು ಮತದಾರರ ಮೆಚ್ಚುಗೆಗೆ ಪಾತ್ರವಾಗಿದೆ. ಯಾವುದೇ ಜಾತಿ, ಧರ್ಮ ಭೇಧ ಭಾವ ಇಲ್ಲದೆ ಎಲ್ಲರ ಜೊತೆಗೆ ಒಡನಾಟ ಇಟ್ಟುಕೊಂಡಿದ್ದಾರೆ.ಅದರಲ್ಲೂ ವಿಶೇಷವಾಗಿ ಅಲ್ಪಸಂಖ್ಯಾತ ಹಾಗೂ ದಲಿತ ಸಮುದಾಯ ಕೂಡ ಸಮರ್ಥ ಯುವ ನಾಯಕ ಅಶ್ವಿನ್ ಪಿರೇರಾಗೆ ಬೆನ್ನೆಲುಬುವಾಗಿ ನಿಂತಿದೆ.ಸದ್ಯ ಮೂಲ್ಕಿ ಮೂಡಬಿದ್ರೆಯ ಎಲ್ಲಾ ಬೂತ್ ಮಟ್ಟದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿರುವ ಪಕ್ಷೇತರ ಅಭ್ಯರ್ಥಿ ಅಶ್ವಿನ್ ಪಿರೇರಾಗೆ ಭಾರೀ ಜನ ಬೆಂಬಲ ವ್ಯಕ್ತವಾಗುತ್ತಿದೆ. ಅಲ್ಲದೇ ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳನ್ನು ದೂರವಿಟ್ಟು ಪಕ್ಷೇತರ ಅಭ್ಯರ್ಥಿಗೆ ಮಣೆ ಹಾಕುವ ಅಭಿಪ್ರಾಯ ಕೂಡಾ ಬಜಪೆ, ಕಿನ್ನಿಗೋಳಿ ,ಪಕ್ಷಿಕೆರೆ ,ಹಳೆಯಂಗಡಿ ಹಾಗೂ ಇನ್ನಿತರ ಪ್ರದೇಶದಲ್ಲಿ ವ್ಯಕ್ತವಾಗಿದೆ. ಯಾಕೆಂದರೆ ಈ ಕ್ಷೇತ್ರದಲ್ಲಿ ೪ ಬಾರಿ ಶಾಸಕರಾದ ಅಭಯ ಚಂದ್ರ ಜೈನ್ ರವರ ಇತ್ತೀಚಿನ ನಡವಳಿಕೆ ಸ್ಥಳೀಯರ ಅಕ್ರೋಶಕ್ಕೆ ಕಾರಣವಾಗಿತ್ತುಅಲ್ಲದೆ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯ ಮಾಡಿಲ್ಲ ಎಂಬ ಆರೋಪ ಗ್ರಾಮಸ್ಥರದ್ದು. ಹೀಗಾಗಿ ಈ ಸಲ ಮೂಲ್ಕಿ ಮೂಡಬಿದ್ರೆ ಕ್ಷೇತ್ರದ ಜನರು ಸಾಮಾಜಿಕ ,ಧಾರ್ಮಿಕ ಕ್ಷೇತ್ರದಲ್ಲಿ ನಿರಂತರ ದುಡಿಯುತ್ತಿರುವ ಯುವ ನಾಯಕ ಪಕ್ಷೇತರ ಅಭ್ಯರ್ಥಿ ಅಶ್ವಿನ್ ಪಿರೇರಾ ಗೆ ಜೈಕಾರ ಹಾಕಲು ಮುಂದಾಗಿದ್ದಾರೆ.

Related posts

Leave a Reply