Header Ads
Header Ads
Breaking News

ರಾಜ್ಯ ವ್ಯಾಪಿ ನಡೆದ ಸೀರತ್ ಅಭಿಯಾನ : ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ

ರಾಜ್ಯ ವ್ಯಾಪಿ ಸೀರತ್ ಅಭಿಯಾನದ ಪ್ರಯುಕ್ತ ಪ್ರವಾದಿ ಮಹಮ್ಮದ್ ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ ಎನ್ನುವ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಕರಿಗಾಗಿ ಆಯೋಜಿಸಿದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಮಂಗಳೂರಿನ ಹಂಪನಕಟ್ಟೆಯ ಮಿಲಗ್ರೀಸ್ ಚರ್ಚ್ ಬಳಿ ಇರುವ ಐ.ಎಂ.ಎ.ಸಭಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಯಾಗಿ ಆಗಮಿಸಿದ ಹಿರಿಯ ಸಾಹಿತಿ ಏರ್ಯ ಲಕ್ಷ್ಮೀನಾರಾಯಣ ಆಳ್ವ ಮಾತನಾಡಿ ಎಲ್ಲಕ್ಕಿಂತ ದೊಡ್ಡ ಕುಲ ಮಾನವ ಕುಲ ಜಾತಿ ಧರ್ಮ ನಮ್ಮ ಅನುಕೂಲಕ್ಕೆ ನಾವು ಮಾಡಿಕೊಂಡಿದ್ದು ಮಾನವ ಮಾನವರೊಡನೆ ಬೆರೆತುಕೊಂಡು ಶಾಂತಿಯಿಂದ ಬದುಕುವುದೇ ಜೀವನ ಈ ನಿಟ್ಟಿನಲ್ಲಿ ನಾವು ಪ್ರವಾದಿ ಮಹಮ್ಮದ್ ರ ಆದರ್ಶಗಳನ್ನು ಅರಿತು ಬಾಳುವುದು ಉತ್ತಮ ಎಂದು ಹೇಳಿದರು.ಬಳಿಕ ಸೀರತ್ ಅಭಿಯಾನ ಸ್ವಾಗತ ಸಮಿತಿ ಅಧ್ಯಕ್ಷರಾದ ಸಿ.ಪಿ.ಹಬೀಬ್ ರೆಹ್ಮಾನ್ ಮಾತನಾಡಿ ಪ್ರವಾದಿ ಮುಹಮ್ಮದ್ ಇಸ್ಲಾಂ ಸಮುದಾಯಕ್ಕೆ ಮಾತ್ರವಲ್ಲ ಇಡೀ ಮಾನವ ಕುಲಕ್ಕೆ ಒಬ್ಬ ಶ್ರೇಷ್ಠ ಮಾರ್ಗದರ್ಶಕ ಎಂದು ಅವರ ಆದರ್ಶಗಳನ್ನು ನೆರೆದಿದ್ದವರ ಮುಂದಿಟ್ಟರು.ಈ ವೇಳೆ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿದ ಉಳಾಯಿಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕರಾದ ಚೇತನ್ ಕೊಪ್ಪರವರಿಗೆ 25 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ,ದ್ವಿತೀಯ ಸ್ಥಾನ ಗಳಿಸಿದ ಕ್ರಷ್ಣಾಪುರ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕಿಯಾದ ಮಂಜುಳಾ ಐ.ಜಿ.ಯವರಿಗೆ 15 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ತ್ರತೀಯ ಸ್ಥಾನ ಗಳಿಸಿದ ಕುಂಬ್ರ ಸರಕಾರಿ ಪಿ.ಯು ಕಾಲೇಜಿನ ಸುಲೈಮಾನ್ ಕೆ.ಯವರಿಗೆ 10 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ಮತ್ತು 11 ಜನರಿಗೆ ಸಮದಾನಕರ ಬಹುಮಾನವಾಗಿ ತಲ 2ಸಾವಿರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಂಗಳೂರು ಯುನಿವರ್ಸಿಟಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಉದಯ್ ಕುಮಾರ್ ಇರ್ವತ್ತೂರು,ಅಬುದಾಬಿ ಬ್ಯಾರಿ ವೆಲ್ಫೇರ್ ಪೋರಂನ ಅಧ್ಯಕ್ಷರಾದ ಮಹಮ್ಮದ್ ಅಲಿ ಉಚ್ವಿಲ್,ಜಮತೆ ಇಸ್ಲಾಂ ಹಿಂದ್ ಕಾರ್ಯದರ್ಶಿ ಕೆ.ಎಂ.ಅಶ್ರಫ್ ಸೀರತ್ ಅಭಿಯಾನದ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಕುಞ್ಞಿ ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply