Header Ads
Breaking News

ರಾಜ್ಯ ಸರಕಾರ, ಜಿಲ್ಲಾಡಳಿತ ಹಲವು ಕ್ರಮ ಕೈಗೊಂಡಿದೆ ಜನ ಸಾಮಾನ್ಯರು ಇದಕ್ಕೆ ಸಹಕಾರ ನೀಡಬೇಕು : ಯು.ಟಿ. ಖಾದರ್ ಹೇಳಿಕೆ

ರಾಜ್ಯದೆಲ್ಲೆಡೆ ಕೊರೊನಾ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಹಲವು ಕ್ರಮಗಳನ್ನು ಕೈಗೊಂಡಿದೆ. ಜನಸಾಮಾನ್ಯರು ಇದರಕ್ಕೆ ಸಹಕಾರ ನೀಡಬೇಕು ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.

ಅವರು ಮಂಗಳೂರಿನ ಸಕ್ರ್ಯೂಟ್ ಹೌಸ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಕೊರೊನಾ ವೈರಸ್ ಸ್ವಯಂ ನಿಯಂತ್ರಣದಿಂದ ಹರಡದಂತೆ ನೋಡಿಕೊಳ್ಳಬೇಕು.ರೋಗ ನಿರೋಧಕ ಶಕ್ತಿ ಇದ್ದವರಿಗೆ ಅಷ್ಟು ಸುಲಭವಾಗಿ ಬರೋದಿಲ್ಲ.ಅದಕ್ಕಾಗಿ ಪ್ರಕೃತಿಯಲ್ಲಿ ಸಿಗುವ ಆಹಾರ ಸೇವಿಸಬೇಕು. ದಕ್ಷಿಣ ಕನ್ನಡ ಜಿಲ್ಲಾಡಳಿತ ಇನ್ನಷ್ಟು ಕ್ರಮ ಕೈಗೊಳ್ಳಬೇಕು.ಉತ್ತರ ಕರ್ನಾಟಕ ಬಸ್‍ನ್ನು ಸ್ವಲ್ಪ ದಿನಗಳ ಮಟ್ಟಿಗೆ ತಡೆಯಬೇಕು.ಕೆಎಸ್‍ಆರ್‍ಟಿಸಿ ಬಸ್‍ನಲ್ಲಿ ಬರೋವವರನ್ನು ತಪಾಸಣೆ ಮಾಡಬೇಕು.ಗಡಿಭಾಗ ತಲಪಾಡಿಯಿಂದ ಸೋಂಕಿತರು ಬಾರದಂತೆ ತಡೆಯಬೇಕು. ತಲಪಾಡಿ, ರೈಲು ನಿಲ್ದಾಣದಲ್ಲಿ ತಪಾಸಣೆ ಮಾಡಬೇಕು.ಎಲ್ಲಾ ವಿಮಾನ ನಿಲ್ದಾಣದಲ್ಲಿ ವ್ಯವಸ್ಥಿತ ತಪಾಸಣೆ ಮಾಡಬೇಕು. ವೈರಸ್‍ನ್ನು ಅಷ್ಟು ಸುಲಭವಾಗಿ ತಡೆಯಲು ಸಾಧ್ಯವಿಲ್ಲ. ಹಾಗಾಗಿ ನಾವೇ ಅದರ ಬಗ್ಗೆ ಜಾಗ್ರತೆ ವಹಿಸಬೇಕು. ವಿಶೇಷ ವಾರ್ಡ್‍ಗಳನ್ನು ಪ್ರತ್ಯೇಕ ಕಟ್ಟಡದಲ್ಲಿ ಮಾಡಬೇಕು. ಜನ ವಸತಿ ಕಡೆ ವಾರ್ಡ್ ಸ್ಥಾಪನೆಗೆ ಒಪ್ಪುದಿಲ್ಲ. ದುಡಿಯುವ ವರ್ಗಕ್ಕೆ ಸಮಸ್ಯೆ ನಿಜ ಹಾಗಾಗಿ ತಿಂಗಳ ಬಾಡಿಗೆಯನ್ನು ಸ್ವಲ್ಪ ಕಡಿಮೆ ಮಾಡಬೇಕು.ದುಡಿಯುವ ವರ್ಗದ ಬಗ್ಗೆ ಕಾಳಜಿ ವಹಿಸಿ ಇದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಯು.ಟಿ. ಖಾದರ್ ಹೇಳಿದರು.

Related posts

Leave a Reply

Your email address will not be published. Required fields are marked *