Header Ads
Header Ads
Breaking News

ರಾಜ್ಯ ಸರ್ಕಾರಕ್ಕೆ ಎರಡೆರಡು ಹೈಕಮಾಂಡ್, ಉಡುಪಿಯಲ್ಲಿ ಸಂಸದೆ ಶೋಭಾ ಕರಂದ್ಲಾಜೆ ಟೀಕೆ

ಸರ್ಕಾರಕ್ಕೆ ಎರಡೆರಡು ಹೈಕಮಾಂಡ್ ಇದೆ. ಒಂದು ಹೈಕಮಾಂಡ್ ಪದ್ಮನಾಭ ನಗರದಲ್ಲಿ ಇನ್ನೊಂದು ದೆಹಲಿಯಲ್ಲಿದೆ ಅಂತ ಸಂಸದೆ ಶೋಭಾ ಟೀಕಿಸಿದ್ದಾರೆ.ಉಡುಪಿಯ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು ರಾಹುಲ್, ಸೋನಿಯಾಗೆ ಈಗ ಸಿದ್ದರಾಮಯ್ಯ ಬೇಡವಾಗಿದಾರೆ. ಕಾಂಗ್ರೇಸ್ 78 ಸೀಟು ಪಡೆಯೋದಕ್ಕೆ ಸಿದ್ದರಾಮಯ್ಯನೇ ಕಾರಣ. ಅಲ್ಪಸಂಖ್ಯಾತ ಮತ್ತು ಕುರುಬರ ಮತ ಸಿಗೋದಕ್ಕೆ ಸಿದ್ದರಾಮಯ್ಯನೇ ಕಾರಣ. ಆದರೆ ತಲೆಮೇಲೆ ಹೊತ್ತು ತಿರುಗಿದ ಸಿದ್ದರಾಮಯ್ಯ ರನ್ನೇ ಇದೀಗ ಕೆಳಹಾಕಿದ್ದಾರೆ. ಕಾಂಗ್ರೇಸ್ ನ ಯೂಸ್ ಆಂಡ್ ಥ್ರೋ ಮಾನಸಿಕತೆ ಸಿದ್ದರಾಮಯ್ಯ ಅರಿತುಕೊಳ್ಳಲಿ. ಕರ್ನಾಟಕ ದ ಯಾವುದೇ ಕಾಂಗ್ರೇಸ್ ನಾಯಕರಿಗೆ ಬೆಲೆ ಇಲ್ಲ. ಕಾಂಗ್ರೇಸ್ ಸಭೆಗಳಲ್ಲಿ ಸಿದ್ದರಾಮಯ್ಯನೇ ಕೊನೆ ಭಾಷಣ ಮಾಡ್ತಿದ್ರು. ಆದರೆ ಈಗ ಕುಮಾರಸ್ವಾಮಿ ಹತ್ರ ಆದ್ರು ಸಿದ್ದರಾಮಯ್ಯ ದೂರ ಆದ್ರು. ಕುರುಬರ ಮತಕ್ಕೆ ಸಿದ್ದರಾಮಯ್ಯ ಬೇಕಿತ್ತು ಎಂದು ಸಿದ್ದರಾಮಯ್ಯರನ್ನು ಹಾಡಿಹೊಗಳಿದ ಶೋಭಾ ಸಿದ್ದರಾಮಯ್ಯ ಮಾಡಿದ ಪಾಪಕ್ಕೆ ಇದೀಗ ಪ್ರಾಯಶ್ಚಿತ್ತ ಮಾಡುವಂತಾಗಿದೆ ಎಂದು ಹೇಳಿದರು.

 

Related posts

Leave a Reply