Header Ads
Header Ads
Breaking News

ರಾಜ್ಯ ಸರ್ಕಾರದ ಜನಪರ ಕಾಳಜಿ ಗ್ರಾಮೀಣ ಭಾಗದ ಜನತೆಗೆ ಧೈರ್ಯ ತುಂಬಿದಂತಾಗಿದೆ ಪಾವೂರಿನಲ್ಲಿ ಸಚಿವ ಯು.ಟಿ, ಖಾದರ್ ಹೇಳಿಕೆ

ಉಳ್ಳಾಲ: ಹಕ್ಕುಪತ್ರ ನೀಡುವ ಐತಿಹಾಸಿಕ ಕಾನೂನು ಜಾರಿಗೊಳಿಸಿದ ರಾಜ್ಯ ಸರಕಾರದ ಜನಪರ ಕಾಳಜಿಯಿಂದಾಗಿ 15 ವರ್ಷಗಳಿಂದ ಆತಂಕದಲ್ಲಿ ಜೀವನ ನಡೆಸುತ್ತಿದ್ದ ಗ್ರಾಮೀಣ ಭಾಗದ ಜನತೆ ಧೈರ್ಯದಿಂದ ಬಾಳುವಂತಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ಹೇಳಿದ್ದಾರೆ.ಅವರು ಪಾವೂರು ಗ್ರಾಮ ಪಂಚಾಯತ್ ಇಲ್ಲಿ ನಿರ್ಮಾಣವಾದ ಭಾರತ್ ನಿರ್ಮಾಣ್ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡದ ಉದ್ಘಾಟನೆ, ಹಕ್ಕು ಪತ್ರ ವಿತರಣೆ, ಸರಕಾರದ ವಿವಿಧ ಸವಲತ್ತುಗಳ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್ ಮಾತನಾಡಿ ತಾಲೂಕಿನ ಸರ್ವಧರ್ಮದವರ ಸೇವೆ ಉದ್ದೇಶದಿಂದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಹಲವು ವರ್ಷಗಳಿಂದ ಸೇವೆಯಲ್ಲಿ ಸಾರ್ಥಕತೆ ಕಂಡುಕೊಂಡಿದ್ದೇನೆ. ಸ್ವ ಕ್ಷೇತ್ರವನ್ನು ಕುಟುಂಬದಂತೆ ನೋಡಿಕೊಳ್ಳುತ್ತಿರುವ ಸಚಿವ ಖಾದರ್ ಅವರ ಕಾರ್‍ಯವೈಖರಿ ಇತರರಿಗೂ ಮಾದರಿ ಎಂದರು.ಪಾವೂರು ಇನೋಳಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕ ಸುಬ್ರಹ್ಮಣ್ಯ ರಾವ್, ಪಾವೂರು ಅರಸ್ತಾನ ಅಲ್ – ಮುಬಾರಕ್ ಜುಮಾ ಮಸೀದಿ ಖತೀಬರಾದ ರಿಯಾಝ್ ಫೈಝಿ, ಉಳಿಯ ಇನ್ಫೆಂಟ್ ಜೀಸಸ್ ಚಚ್ ನ ಧರ್ಮಗುರು ಫಾ| ಜೆರಾಲ್ಡ್ ಲೋಬೊ ಗೌರವ ಉಪಸ್ಥಿತರಿದ್ದರು.

Related posts

Leave a Reply