Header Ads
Header Ads
Breaking News

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಕ್ರೀಡಾ ನೀತಿ ಬಿಡುಗಡೆ ಮೊದಲ ಕ್ರೀಡಾ ನೀತಿಯಲ್ಲಿ ಸಮಗ್ರ ಕ್ರೀಡೆಗೆ ಉತ್ತೇಜನ ರಾಜ್ಯದಿಂದ ಒಲಿಂಪಿಕ್ಸ್ ನಲ್ಲಿ ಕನಿಷ್ಟ 4 ಚಿನ್ನದ ಪದಕದ ಗುರಿ ನಾಲ್ಕು ಸ್ಥಂಭ ಹಾಗೂ 17 ಗುರಿಯ ಕ್ರೀಡಾ ನೀತಿ ಬಿಡುಗಡೆ

ಎರಡು ವರ್ಷಗಳ ಸತತ ಪ್ರಯತ್ನ, ಸಾಲು ಸಾಲು ಸಭೆ, ಅಭಿಪ್ರಾಯ ಸಂಗ್ರಹದ ಬಳಿಕ ರಾಜ್ಯದಲ್ಲಿ ಮೊದಲ ಬಾರಿಗೆ ಕ್ರೀಡಾ ನೀತಿಯೊಂದು ಬಿಡುಗಡೆಯಾಗಿದೆ. ಇಂದಿನಿಂದ ಹೊಸ ನೀತಿ ರಾಜ್ಯದಲ್ಲಿ ಜಾರಿಗೆಯಾಗಲಿದ್ದು ಕ್ರೀಡಾಪಟುಗಳ ಉತ್ತೇಜನ, ಕ್ರೀಡೆಯಲ್ಲಿ ಸಮಗ್ರ ಅಭಿವೃದ್ದಿಯ ಚಿಂತನೆಯ ಕ್ರೀಡಾ ನೀತಿಯನ್ನು ಬಿಡುಗಡೆಗೊಳಿಸಲಾಗಿದೆ.ರಾಜ್ಯದ ಅಥ್ಲಿಟ್ಸ್ ಗಳು ಒಲಿಂಪಿಕ್ಸ್ ನಲ್ಲಿ ಕನಿಷ್ಟ ನಾಲ್ಕು ಚಿನ್ನದ ಪದಕ ಮತ್ತು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಮೊದಲ ಮೂರು ಸ್ಥಾನಗಳನ್ನು ಜಯಿಸಬೇಕೆಂಬ ಉದ್ದೇಶದಿಂದ ತಯಾರಿಸಲಾಗಿರುವ ನಾಲ್ಕು ಸ್ಥಂಭ ಹಾಗೂ 17 ಗುರಿಯನ್ನು ಹೊಂದಿರುವ ಮಹತ್ವಾಕಾಂಕ್ಷೆಯ ಕರ್ನಾಟಕ ರಾಜ್ಯ ಕ್ರೀಡಾ ನೀತಿ-2018ನ್ನು ರಾಜ್ಯ ಕ್ರೀಡಾ ಮತ್ತು ಯುವಜನ ಸಬಲೀಕರಣ ಸಚಿವ ಪ್ರಮೋದ್ ಮದ್ವರಾಜ್ ಉಡುಪಿಯಲ್ಲಿ ಬಿಡುಗಡೆಗೊಳಿಸಿದ್ದಾರೆ. ರಾಜ್ಯದ ಬೆಂಗಳೂರು, ಕಲ್ಭುರ್ಗಿ, ಬೆಳಗಾವಿ, ಉಡುಪಿಯಲ್ಲಿ ರಾಜ್ಯದ ಎಲ್ಲಾ ಪ್ರಮುಖರ, ಕ್ರೀಡಾ ಸಕ್ತರ ಸಭೆ ಕರೆದು ಅಭಿಪ್ರಾಯ ಪಡೆದು ಎಲ್ಲಾ ಇಲಾಖೆಯೊಂದಿಗೆ ಚರ್ಚಿಸಿ ತಯಾರಿಸಲಾದ ಕ್ರೀಡಾ ನೀತಿಗೆ ಮಾ.೮ರಂದು ಮುಖ್ಯಮಂತ್ರಿಗಳ ಅದ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಗಿದೆ ಎಂದು ಪ್ರಮೋದ್ ಮದ್ವರಾಜ್ ತಿಳಿಸಿದ್ದಾರೆ.

ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಅಭ್ಯಾಸಗಳನ್ನು ಕ್ರೀಡೆ ಮತ್ತು ಕ್ರೀಡಾ ಪ್ರಾಧಿಕಾರಗಳಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ. ಕ್ರೀಡಾ ಕ್ಷೇತ್ರದಲ್ಲಿ ಮೋಸ ವಂಚನೆಗಳನ್ನು ತಡೆಗಟ್ಟಲು ಮತ್ತು ಕ್ರೀಡಾ ಒಗ್ಗಟ್ಟನ್ನು ಬೆಳೆಸಲು ಕಾನೂನು ರೂಪಿಸುವುದು. ರಾಜ್ಯದ ಜಿಡಿಪಿಗಾಗಿ ಕ್ರೀಡಾ ಉದ್ದಿಮೆ, ಕ್ರೀಡಾ ವ್ಯಾಪಾರ, ಕ್ರೀಡಾ ಉದ್ಯಮಶೀಲತೆಯನ್ನು ಸುಮಾರು 5000ಕೋಟಿ ರೂನಷ್ಟು ವಾರ್ಷಿಕವಾಗಿ ಒದಗಿಸುವುದು. ಪ್ರತಿಯೊಂದು ಜಿಲ್ಲೆಯಲ್ಲಿ ವ್ಯವಸ್ಥಿತವಾದ ಕ್ರೀಡಾ ಸಲಕರಣೆ, ಮೂಲಭೂತ ಸೌಕರ್ಯ ಒದಗಿಸುವುದು.ಪಿಂಚಣಿ ಯೋಜನೆ, ಇಲಾಖೆಗಳಲ್ಲಿ ಮೀಸಲಾತಿ ನೀಡುವುದು
ಹೀಗೆ ಹಲವಾರು ಅಂಶಗಳನ್ನು ಒಳಗೊಂಡಿರುವ ಕ್ರೀಡಾ ನೀತಿ ಬಿಡುಗಡೆಯಾಗಿದೆ.

ಒಟ್ಟಿನಲ್ಲಿ ರಾಜ್ಯದಲ್ಲಿ ಹೊಸ ಕ್ರೀಡಾ ನೀತಿಯೊಂದು ಬಿಡುಗಡೆಯಾಗಿದೆ. ಆದ್ರೆ ಸಚಿವರು ತರಾತುರಿಯಲ್ಲಿ ಕ್ರೀಡಾ ನೀತಿ ಬಿಡುಗಡೆ ಮಾಡಿದ್ದು ನಾಳೆಯೇ ಚುನಾವಣೆ ಘೋಷಣೆ ಸಾಧ್ಯತೆ ಇರುವ ಕಾರಣ ಉಡುಪಿಯಲ್ಲೇ ಸಚಿವರು ಕ್ರೀಡಾ ನೀತಿ ಬಿಡುಗಡೆಗೊಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಕ್ರೀಡಾ ನೀತಿಯಿಂದ ರಾಜ್ಯದ ಕ್ರೀಡಾಪಟುಗಳಿಗೆ ಉತ್ತೇಜನ ಸಿಗಲಿ ಎಂಬುದೇ ಆಶಯ.

 

Related posts

Leave a Reply