Header Ads
Header Ads
Header Ads
Breaking News

ರಾಜ್ಯ ಸರ್ಕಾರಿ ನೌಕರರ ಸಂಘದ ಶಾಖೆ ಬಂಟ್ವಾಳದಲ್ಲಿ ನೂತನ ಸಭಾಭವನ ನಿರ್ಮಾಣ ಸಚಿವ ರಮಾನಾಥ ರೈ ಅವರಿಂದ ಉದ್ಘಾಟನೆ

ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಇದರ ಬಂಟ್ವಾಳ ತಾಲೂಕು ಶಾಖೆಯ ಸರಕಾರಿ ನೌಕರರ ನೂತನ ಸಭಾ ಭವನದ ಉದ್ಘಾಟನೆ ನಡೆಯಿತು.

ರಾಜ್ಯ ಅರಣ್ಯ ಸಚಿವ ಬಿ.ರಮಾನಾಥ ರೈ ನೂತನ ಸಭಾಭವನವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಸಚಿವರು, ಸರಕಾರಿ ನೌಕರರು ಹಾಗೂ ಜನಪ್ರತಿನಿಧಿಗಳು ಹೆಚ್ಚು ಬಾಂದವ್ಯದಿಂದ ಕೆಲಸ ಮಾಡಿದಾಗ ಅದು ಪರಿಣಾಮಕಾರಿಯಾಗಲಿದೆ ಎಂದರು. 6 ನೇ ವೇತನ ಆಯೋಗದ ಜಾರಿಗೆ ಶ್ರಮಿಸುವುದಾಗಿ ತಿಳಿಸಿದ ಸಚಿವರು ತಾಲೂಕಿನಲ್ಲಿ ಸರಕಾರಿ ನೌಕರರ ವಸತಿ ನಿಲಯ ಹಾಗೂ ಗುರು ಭವನ ನಿರ್ಮಾಣ ಕ್ಕೆ ಪ್ರಯತ್ನಸುವುದಾಗಿ ತಿಳಿಸಿದರು.

ಸಂಘದ ಅಧ್ಯಕ್ಷ ಉಮಾನಾಥ ರೈ ಮೇರಾವು ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೆರಾ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಪುರಸಭೆ ಅಧ್ಯಕ್ಷ ರಾಮಕೃಷ್ಣ ಆಳ್ವ, ತಹಶೀಲ್ದಾರ್ ಪುರಂದರ ಹೆಗ್ಡೆ, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಸಿಪ್ರಿಯಾನ್ ಮಿರಾಂಡ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್, ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್ ನಾಯಕ್, ಸಿವಿಲ್ ಇಂಜಿನಿಯರ್ ರಾಮಪ್ರಸಾದ್ ಕೊಂಬಿಲ, ಸಂಘದ ಮಾಜಿ ಅಧ್ಯಕ್ಷ ನಾರಾಯಣ ಬೆಳ್ಚಪಾಡ, ಮೋಹನ್ ರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ರಾಜ್ಯ ಹಾಗೂ ಜಿಲ್ಲಾ ಪ್ರಶಸ್ತಿ ಪಡೆದ ಶಿಕ್ಷಕರನ್ನು ವಿವಿಧ ಇಲಾಖೆಯಲ್ಲಿ ನಿವೃತ್ತರಾದ ನೌಕರರನ್ನು ಗೌರವಿಸಲಾಯಿತು. ಸರಕಾರಿ ನೌಕರರ ಪ್ರತಿಭಾವಂತ ಅಭಿನಂದಿಸಲಾಯಿತು.
ವರದಿ: ಸಂದೀಪ್ ಬಂಟ್ವಾಳ

Related posts

Leave a Reply