

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಸಹಾಯಕ ಪ್ರಾಧ್ಯಾಪಕಿ ಗೀತಾ ವಸಂತ್ ಇಜಿಮಾನ್ ಅವರ ಲೇಖನ ಬೆಳಗಾವಿಯ ರಾಣಿ ಚೆನ್ನಮ್ಮ
ವಿಶ್ವವಿದ್ಯಾಲಯದ ಪದವಿ ಪಠ್ಯಕ್ರಮಕ್ಕೆ ಸೇರ್ಪಡೆಯಾಗಿದೆ.ಗೀತಾ ವಸಂತ ಇಜಿಮಾನ್ ಆನ್ಲೈನ್ ಶಿಕ್ಷಣದ ಕುರಿತು ʼಇ ಶಿಕ್ಷಣ ಎಲ್ಲಿದೆ (ಆ) ಭಾವ, ಬಂಧ?ʼ ಶೀರ್ಷಿಕೆಅಡಿಯಲ್ಲಿ ಬರೆದ ಲೇಖನವನ್ನು ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳ ಕನ್ನಡಪಠ್ಯ ಪುಸ್ತಕದಲ್ಲಿ ಸೇರ್ಪಡೆಗೊಳಿಸಲಾಗಿದೆ.ವಿಶ್ವವಿದ್ಯಾನಿಲಯದ ಪ್ರಸಾರಾಂಗವು ಈ ಬರಹವನ್ನು ಒಳಗೊಂಡ ಪಠ್ಯ ಪುಸ್ತಕವನ್ನು ಪ್ರಕಟಸಿದೆ, ಮೊದಲನೇಸೆಮಿಸ್ಟರ್ ನ ಬಿ.ಎ, ಬಿ.ಸಿ.ಎ, ಬಿ.ಎಸ್ಸಿ ಕಂಪ್ಯೂಟರ್ ವಿದ್ಯಾರ್ಥಿಗಳಿಗೆ ಪಠ್ಯವಾಗಿದೆ.