
ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಆಯೋಜಿಸಲಾಗುತ್ತಿರುವ ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನದ ಐದನೇ ಹಂತದ ಪ್ರಯುಕ್ತ ಹಮ್ಮಿಕೊಳ್ಳಲಾಗುತ್ತಿರುವ ಶ್ರಮದಾನಗಳ 10ನೇ ಕಾರ್ಯಕ್ರಮವನ್ನು ನಗರದ ಸರ್ವೀಸ್ ಬಸ್ ನಿಲ್ದಾಣ ಹಾಗೂ ಸುತ್ತಮುತ್ತಲಿನ ಪರಿಸರದಲ್ಲಿ ಹಮ್ಮಿಕೊಳ್ಳಲಾಯಿತು.ಭಾರತೀಯ ಕೆಥೊಲಿಕ್ ಯುವ ಸಂಚಾಲನ್ ಕಾರ್ಯದರ್ಶಿ ರೋಶನ್ ರೊಕೊ ಹಾಗೂ ಪೈಂಟ್ ಡೀಲರ್ಸ್ ಅಸೋಸಿಯೇಶನ್ ಅಧಕ್ಷ ಗುರುದತ್ತ ಶೆಣೈ 10ನೇ ಶ್ರಮದಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮೋಹನ್ ಕೊಟ್ಟಾರಿ, ಮಹೇಶ್ ಕಾಮತ್, ರಾಜೇಂದ್ರ ಶೆಟ್ಟಿ, ರಮೇಶ್ ಶೆಣೈ, ಶ್ರೀಧರ ಕಾಮತ್, ಇಮ್ತಿಯಾಜ್ ಶೇಖ್, ಡೆಂಜಿಲ್, ಸಪ್ನಾ ನೀರುಮಾರ್ಗ ಸೇರಿದಂತೆ ಅನೇಕ ಕಾರ್ಯಕರ್ತರು ಅಭಿಯಾನದಲ್ಲಿ ಭಾಗಿಯಾಗಿದ್ದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಕಾರ್ಯಕರ್ತರು ಸರ್ವಿಸ್ ಬಸ್ ನಿಲ್ದಾಣವನ್ನು ಸ್ವಚ್ಛ ಮಾಡಿದರು. ಭಾರತೀಯ ಕೆಥೋಲಿಕ್ ಯುವ ಸಂಚಲನದ ಸುಮಾರು ಐವತ್ತು ಜನ ಸದಸ್ಯರು ಅಧ್ಯಕ್ಷರಾದ ಆಡ್ಲಿನ್ ಜೋತ್ನಾ ಮಾರ್ಗದರ್ಶನದಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವ ಸ್ಥಳಗಳನ್ನು ಶುಚಿಗೊಳಿಸಿದರು. ನಿವೇದಿತಾ ಬಳಗ ಹಾಗೂ ಶಾರದಾ ಮಹಿಳಾ ವೃಂದದ ಸದಸ್ಯೆಯರು ಬಸ್ ನಿಲ್ದಾಣದ ಹೊರಾವರಣವನ್ನು ಗುಡಿಸಿ ಸ್ವಚ್ಛಗೊಳಿಸಿದರು.
ಈ ಸಂದರ್ಭದಲ್ಲಿ ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಸಂಚಾಲಕರಾದ (ಸ್ವಾಮಿ ಏಕಗಮ್ಯಾನಂದ, ಅಭಿಯಾನದ ಮುಖ್ಯ ಸಂಯೋಜಕ ಉಮಾನಾಥ್ ಕೋಟೆಕಾರ್ ಉಪ ಪೋಲಿಸ್ ಆಯುಕ್ತರಾದ ಹನುಮಂತರಾಯಪ್ಪ, ಗಣೇಶ್ ಆಚಾರ್ಯ, ಚಂದ್ರಶೇಖರ್ ಭಟ್, ಸಂದೀಪ ಲೋಬೊ, ಎಂ ಜಿ ನಾಯಕ್ ಮೊದಲಾದವರು ಭಾಗವಹಿಸಿದ್ದರು.