Header Ads
Breaking News

ರಾಮಕೃಷ್ಣ ಮಿಷನ್‌ನಿಂದ 5 ಹಂತದ 19ನೇ ಸ್ವಚ್ಛತಾ ಅಭಿಯಾನ

ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ 5ನೇ ಹಂತದ 19ನೇ ಆದಿತ್ಯವಾರದ ಶ್ರಮದಾನವನ್ನು ಕುಲಶೇಖರ ಚೌಕಿಯಲ್ಲಿ ನಡೆಸಲಾಯಿತು. ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ ದಕ್ಷಿಣ ಕನ್ನಡ ಇದರ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಜಿ ವಿ ಹೆಗಡೆ ಹಾಗೂ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಶ್ರೀ ಜಯದೇವಪ್ಪ ಇವರು 19ನೇ ವಾರದ ಶ್ರಮದಾನಕ್ಕೆ ಚಾಲನೆ ನೀಡಿದರು.
ಅಭಿಯಾನದ ಪ್ರಮುಖರಾದ ಉಮಾನಾಥ್ ಕೋಟೆಕಾರ್, ರಂಜನ್ ಬೆಳ್ಳರ್ಪಾಡಿ, ಅನಿರುದ್ಧ ನಾಯಕ್, ಶಿವರಾಮ್ ಆಡೂರ್, ಬಾಲಕೃಷ್ಣ ನಾೈಕ್, ಶಿವರಾಜ್ ಪೂಜಾರಿ, ಸುನಂದಾ ಶಿವರಾಂ, ನಿಹಾಲ್ ಶೆಟ್ಟಿ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕುಲಶೇಖರ್ ಚೌಕಿಯಲ್ಲಿರುವ ಬಸ್ ತಂಗುದಾಣದಿಂದ ಸ್ವಚ್ಛತೆಯನ್ನು ಆರಂಭಿಸಲಾಯಿತು. ಪ್ರಥಮದಲ್ಲಿ ಹಿಮ್ಮತ್ ಸಿಂಗ್ ಹಾಗೂ ಕಾರ್ಯಕರ್ತರು ಬಸ್ ತಂಗುದಾಣವನ್ನು ಸ್ವಚ್ಛಗೊಳಿಸಿದರು. ಮೇಲ್ಚಾವಣಿಯನ್ನೂ ಹತ್ತಿ ಮೇಲಿದ್ದ ಎಲೆ ಕಸ ಕಡ್ಡಿಯನ್ನು ತೆಗೆದು ಸ್ವಚ್ಛಗೊಳಿಸಿದರು. ನಂತರ ಅಲ್ಲಲ್ಲಿ ಅಂಟಿಸಿದ್ದ ಪೋಸ್ಟರ್‌ಗಳನ್ನು ಕಿತ್ತು ತೆಗೆದರು. ಬಳಿಕ ಆನಂದ ಅಡ್ಯಾರ್, ವಿಖ್ಯಾತ್ ಹಾಗೂ ಕಾರ್ಯಕರ್ತರು ಬಣ್ಣ ಬಳಿದು ತಂಗುದಾಣವನ್ನು ಅಂದಗೊಳಿಸಿದರು.

Related posts

Leave a Reply

Your email address will not be published. Required fields are marked *