Header Ads
Header Ads
Breaking News

ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಸ್ವಚ್ಛ ಕಾಯರ್ತಡ್ಕ ಕಾರ್ಯಕ್ರಮ

ಬೆಳ್ತಂಗಡಿ : ಮಂಗಳೂರಿನ ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಸ್ವಚ್ಛ ಕಾಯರ್ತ್ತಡ್ಕ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮದಲ್ಲಿ ಕುಲಾಲ ಸೇವಾ ಸಂಘ, ಗೌಡರ ಯುವ ವೇದಿಕೆಯ ಕಾರ್ಯಕರ್ತರು ಸೇರಿ ಸುಮಾರು 45 ಕಾರ್ಯಕರ್ತರು ಭಾಗವಹಿಸಿದ್ದರು. ಮನೋಹರ್ ಕುಲಾಲ್ ನೇತೃತ್ವದಲ್ಲಿ ಬಸ್ಸು ನಿಲ್ದಾಣಕ್ಕೆ ಪೈಂಟ್ ಹಚ್ಚಿ, ವಿದ್ಯಾರ್ಥಿಗಳು, ಮಹಿಳೆಯರು ಭಾಗವಹಿಸಿ ರಸ್ತೆಬದಿಯ ಕಸಕಡ್ಡಿಗಳನ್ನು ಸ್ವಚ್ಚಗೊಳಿಸಿದರು. 

ಕಳೆಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದಾ, ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾಧ್ಯಾಪಕರಾದ ಡಾ ಕುಶಾಲಪ್ಪ, ಯುವಶಕ್ತಿ ಕಾಯರ್ತ್ತಡ್ಕದ ಸಹ ಸಂಚಾಲಕ ಚಂದ್ರಶೇಖರ ಕುಲಾಲ್, ಎಸ್‌ಡಿಎಂಸಿ ಅಧ್ಯಕ ಪ್ರಸನ್ನ, ಕುಶಾಲಪ್ಪ ಪಾಂಗಳ, ಲೋಕೇಶ್ ಹಾರಿತ್ತಕಜೆ ಹಾಜರದ್ದರು.

ಪ್ರತೀ ತಿಂಗಳ ಒಂದು ದಿನ ಸ್ವಚ್ಚತಾ ಕಾರ್ಯಕ್ರಮವನ್ನು ರಾಮಕೃಷ್ಣ ಮಿಷನ್ ಸಹಕಾರದಲ್ಲಿ, ಯುವಶಕ್ತಿ ಕಾಯರ್ತಡ್ಕತಂಡ ಕಾಯರ್ತ್ತಡ್ಕದಲ್ಲಿ ನಡೆಸುತ್ತಿದೆ.

Related posts

Leave a Reply