Header Ads
Header Ads
Breaking News

ರಾಮಕೃಷ್ಣ ಮಿಷನ್ ನ ಸ್ವಚ್ಛ ಮಂಗಳೂರು ಅಭಿಯಾನದ 5ನೇ ವರ್ಷದ 38ನೇ ಸ್ವಚ್ಛತಾ ಶ್ರಮದಾನ

ರಾಮಕೃಷ್ಣ ಮಿಷನ್ ವತಿಯಿಂದ ರಾಮಕೃಷ್ಣ ಮಿಷನ್ ಸಂಚಾಲಕರಾದ ಶ್ರೀ ಏಕಗಮ್ಯಾನಂದ ಸ್ವಾಮಿ ನೇತೃತ್ವದಲ್ಲಿ ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನದ 5ನೇ ವರ್ಷದ 38ನೇ ಸ್ವಚ್ಛತಾ ಶ್ರಮದಾನವು ಕಾವೂರಿನಲ್ಲಿ ನಡೆಯಿತು. ಗಾಂಧಿನಗರದಲ್ಲಿರುವ ಬಿ.ಜಿ.ಎಸ್ ವಿದ್ಯಾಸಂಸ್ಥೆಯ ಮುಂಭಾಗದಲ್ಲಿ ಶ್ರಮದಾನಕ್ಕೆ ಚಾಲನೆ ನೀಡಲಾಯಿತು. ಕಾವೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರುಗಳಾದ ಮನೋಜ್ ಲೂಯಿಸ್ ಹಾಗೂ ರೇಖಾ ಎಸ್ ಎನ್ ಜಂಟಿಯಾಗಿ ಶ್ರಮದಾನಕ್ಕೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಈ ಸಂದರ್ಭ ಗಣೇಶ್ ಕಾರ್ಣಿಕ್, ರಂಜನ್ ಬೆಳ್ಳರ್ಪಾಡಿ, ಉಪನ್ಯಾಸಕಿ ಮೋಹಿನಿ ಎಚ್ ಕೆ, ಸುಜಿತ್ ಭಂಡಾರಿ, ಗುರುದತ್ತ ಶೆಣೈ, ಸ್ವಪ್ನಿಲ್ ಚೌಟ, ಶರಣ, ಧನುಶ್ ಡಿ ಬಿ, ಪ್ರವೀಣ ಶೆಟ್ಟಿ ಇನ್ನಿತರ ಸ್ವಯಂ ಸೇವಕರು ಭಾಗವಹಿಸಿದ್ದರು.

Related posts

Leave a Reply

Your email address will not be published. Required fields are marked *