Header Ads
Breaking News

ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಸ್ವಚ್ಛ ಮಂಗಳೂರು ಅಭಿಯಾನದ 5ನೇ ಹಂತದ 23ನೇ ಶ್ರಮದಾನ

ರಾಮಕೃಷ್ಣ ಮಿಷನ್ ಮಾರ್ಗದರ್ಶನದಲ್ಲಿ ಸ್ವಾಮಿ ಏಕಗಮ್ಯಾನಂದಜಿ ನೇತೃತ್ವದಲ್ಲಿ ಮಂಗಳೂರಿನಲ್ಲಿ ಜರುಗುತ್ತಿರುವ ಸ್ವಚ್ಛ ಮಂಗಳೂರು ಅಭಿಯಾನದ5ನೇ ಹಂತದ 23ನೇ ಭಾನುವಾರದ ಶ್ರಮದಾನ ಅಶೋಕನಗರದ ಸೇಂಟ್ ಡೊಮಿನಿಕ್ ಚರ್ಚ್ ಎದುರುಗಡೆ ನಡೆಯಿತು. ವಂದನೀಯ ಫಾ. ಅಕ್ವೀನ್ ನರೋಹ್ನ ಮುಖ್ಯಸ್ಥರು, ಸಂತ ಡೋಮಿನಿಕ್ ಚರ್ಚ್ ಅಶೋಕನಗರ ಹಾಗೂ ಉದ್ಯಮಿ ರಾಮಕುಮಾರ್ ಬೇಕಲ್ ಜಂಟಿಯಾಗಿ ಅಭಿಯಾನಕ್ಕೆ ಹಸಿರು ನಿಶಾನೆ ತೋರಿ ಶುಭಾರಂಭ ಮಾಡಿದರು. ಈ ಸಂದರ್ಭ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಉಮಾಪ್ರಸಾದ್ ಕಡೇಕಾರ್, ಪ್ರೋ. ಸತೀಶ್ ಭಟ್, ಸರಿತಾ ಶೆಟ್ಟಿ, ರಾಮಚಂದ್ರ ಶೆಟ್ಟಿ, ಕೇಶವ ಶೆಟ್ಟಿಗಾರ್, ಪ್ರಕಾಶ್ ಎಸ್ ಎನ್, ಕಿರಣಕುಮಾರ್ ಕೋಡಿಕಲ್, ಶಿವರಾಜ್ ಶೆಟ್ಟಿ ಹಾಗೂ ದತ್ತ ಪಾರಡೈಸ್ ನಿವಾಸಿಗಳು ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *