Header Ads
Breaking News

ರಾಮಕೃಷ್ಣ ಮಿಷನ್ ವತಿಯಿಂದ ಸ್ವಚ್ಚ ಮಂಗಳೂರು ಅಭಿಯಾನದ 15ನೇ ಶ್ರಮದಾನ.

ರಾಮಕೃಷ್ಣ ಮಿಷನ್‌ನ ಸಂಚಾಲಕರಾದ ಏಕಗಮ್ಯಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಸ್ವಚ್ಚ ಮಂಗಳೂರು ಅಭಿಯಾನದ 5ನೇ ವರ್ಷದ 15ನೇ ಶ್ರಮದಾನ ವೆಲೆನ್ಸಿಯಾ ಗೋರಿಗುಡ್ಡೆ ಪರಿಸರದಲ್ಲಿ ನಡೆಯಿತು.ವಂದನೀಯ ಫಾ ಜೇಮ್ಸ್ ಡಿಸೋಜಾ ಹಾಗೂ ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೋ ಈ ಶ್ರಮದಾನಕ್ಕೆ ಚಾಲನೆಯನ್ನ ನೀಡಿದ್ರು. ಮೊದಲಿಗೆ ಸ್ವಚ್ಛ ಯಕ್ಕೂರು ಕಾರ್ಯಕರ್ತರು ಗೋರಿಗುಡ್ಡೆಯಲ್ಲಿರುವ ಸ್ಮಶಾನದ ಮುಂಭಾಗದಲ್ಲಿದ್ದ ಕಸದ ರಾಶಿಯನ್ನು ತೆರವುಗೊಳಿಸಿದರು. ಹಾಗೂ ಜಲ್ಲಿಕಲ್ಲು ಮಣ್ಣುಗಳ ರಾಶಿಯನ್ನು ಜೆಸಿಬಿ ಬಳಸಿ ತೆಗೆಯಲಾಯಿತು. ಜೊತೆಗೆ ತ್ಯಾಜ್ಯಗಳಿಂದ ತುಂಬಿದ್ದ ತೋಡುಗಳನ್ನು ಸ್ವಚ್ಛಗೊಳಿಸಲಾಯಿತು. ಇದೀಗ ಅಲ್ಲಿಯ ಇಡೀ ಜಾಗದಲ್ಲಿ ಹೂಕುಂಡಗಳನ್ನಿಟ್ಟು ಆಕರ್ಷಣೀಯ ಸ್ಥಳವನ್ನಾಗಿಸಲಾಗಿದೆ. ನಿಟ್ಟೆ ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿಗಳು ಡಾ. ಧನೇಶ್ ಕುಮಾರ ನೇತೃತ್ವದಲ್ಲಿ ವೆಲೆನ್ಸಿಯಾ ಚರ್ಚ್ ಬದಿಯ ರಸ್ತೆ ಹಾಗೂ ಪಾದಚಾರಿ ಮಾರ್ಗಗಳನ್ನು ಹಸನು ಮಾಡಿದರು. ಸಂದೀಪ್ ಕೋಡಿಕಲ್ ಹಾಗೂ ಕಾರ್ಯಕರ್ತರು ವೆಲೆನ್ಸಿಯಾ ಸರ್ಕಲ್ ಬಳಿಯಿದ್ದ ತ್ಯಾಜ್ಯರಾಶಿಯನ್ನು ತೆಗೆದು ಸ್ವಚ್ಛಗೊಳಿಸಿದರು.ಈ ಸಂದರ್ಭ ಫಾ. ಅರುಣ ಲೋಬೊ, ಫಾ. ಜೊಸ್ವಿನ್ ಪ್ರವೀನ್, ಕುದ್ರೋಳಿ ಗಣೇಶ್, ಪ್ಯಾಟ್ರಿಕ್ ಡಿಸೋಜಾ, ಮನೋಹರ್ ಶೆಟ್ಟಿ, ಲಿಜಿ ಪಿಂಟೋ, ರಾಧಾಕೃಷ್ಣ ಪಡೀಲ್, ಪ್ರೋ. ಫ್ರಾನ್ಸಿಸ್ ಕ್ರಾಸ್ತಾ, ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *