Header Ads
Breaking News

ರಾಮಕೃಷ್ಣ ಮಿಷನ್ ವತಿಯಿಂದ 5ನೇ ವರ್ಷದ 27ನೇ ವಾರದ ಶ್ರಮದಾನ

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 5ನೇ ವರ್ಷದ 27ನೇ ವಾರದ ಶ್ರಮದಾನವನ್ನು ಜಪ್ಪಿನಮೊಗರು ಪ್ರದೇಶದಲ್ಲಿ ಹಮ್ಮಿಕೊಳ್ಳಲಾಯಿತು. ಜಪ್ಪಿನಮೊಗರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ನೂತನವಾಗಿ ನಿರ್ಮಿಸಲಾದ ಬಸ್ ತಂಗುದಾಣದ ಮುಂಭಾಗದಲ್ಲಿ 27ನೇ ಶ್ರಮದಾನಕ್ಕೆ ಚೆನೈನ ರಾಮಕೃಷ್ಣ ಮಿಷನ್ ವೇದಾಂತ ಕೇಸರಿ ಮಾಸಪತ್ರಿಕೆ ಪ್ರಧಾನ ಸಂಪಾದಕರಾದ ಸ್ವಾಮಿ ಮಹಾಮೇಧಾನಂದಜಿ ಇವರು ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಬಳಿಕ ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದಡಿ ಜಪ್ಪಿನಮೊಗರುವಿನಲ್ಲಿ ನೂತನವಾಗಿ ನಿರ್ಮಿಸಲಾದ ಬಸ್ ತಂಗುದಾಣವನ್ನು ಸ್ವಾಮಿ ವೇದನಿಷ್ಠಾನಂದಜಿ ರಾಮಕೃಷ್ಣ ಮಿಶನ್ ರಾಜಕೋಟ್ ಇವರು ಲೋಕಾರ್ಪಣೆಗೊಳಿಸಿದರು.  

ಜಪ್ಪಿನಮೊಗರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ದಡಗಳು ಕಟ್ಟಡತ್ಯಾಜ್ಯ ಹಾಗೂ ಪ್ಲಾಸ್ಟಿಕ್‍ತ್ಯಾಜ್ಯದಿಂದ ತುಂಬಿ ನೋಡುಗರಿಗೆ ಹಾಗೂ ಅಲ್ಲಿನ ಪರಿಸರದ ಜನರಿಗೆ ಅಸಹ್ಯ ಹುಟ್ಟಿಸುತ್ತಿತ್ತು. ಇಂದು ಆ ಪರಿಸರವನ್ನು ಸ್ವಚ್ಛಗೊಳಿಸಲಾಯಿತು. ಮೊದಲಿಗೆ ಹಿರಿಯ ಸ್ವಯಂ ಸೇವಕರು ಗುಂಪುಗಳನ್ನು ರಚಿಸಿಕೊಂಡು ಜೆಪ್ಪು ರಸ್ತೆಯಲ್ಲಿರುವ ಹಳೆಯ ಬಸ್ ತಂಗುದಾಣದ ಸುತ್ತಮುತ್ತ ಸ್ವಚ್ಛಗೊಳಿಸಿದರು. ಎರಡನೇ ತಂಡ ನೂತನವಾಗಿ ನಿರ್ಮಿಸಿದ ಬಸ್ ತಂಗುದಾಣದ ಹಿಂಭಾಗ ಹಾಗೂ ಬದಿಗಳನ್ನು ಸ್ವಚ್ಛಗೊಳಿಸಿದರು. ಸ್ವಚ್ಛ ಎಕ್ಕೂರು ತಂಡ ಯಶೋಧರ ಚೌಟ ಹಾಗೂ ಪ್ರಶಾಂತ ಎಕ್ಕೂರ್ ನೇತೃತ್ವದಲ್ಲಿ ನೇತ್ರಾವತಿ ಸೇತುವೆಯ ಬದಿಗಳನ್ನು ಸ್ವಚ್ಛಗೊಳಿಸಿದರು. ಈ ಸಮಾರಂಭದಲ್ಲಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಸುರೇಂದ್ರ ಜೆ, ಉಮಾಪ್ರಸಾದ್ ಕಡೇಕಾರ್. ರಾಜೇಶ್ ಕರ್ಕೇರಾ, ರಾಕೇಶ್ ಆಂಟನಿ, ಹರೀಶ್ ಗೌರಿಶಂಕರ್, ಚಿಂತನ್ ಡಿ ವಿ ಇನ್ನಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *