Header Ads
Breaking News

ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನ: ಮಂಗಳೂರಿನ ಕದ್ರಿ-ಮಲ್ಲಿಕಟ್ಟೆ ಪ್ರದೇಶದಲ್ಲಿ ಸ್ವಚ್ಛತೆ

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 5ನೇ ವರ್ಷದ 18ನೇ ರವಿವಾರದ ಶ್ರಮದಾನವನ್ನು ಕದ್ರಿ-ಮಲ್ಲಿಕಟ್ಟೆ ಪ್ರದೇಶದಲ್ಲಿ ಕೈಗೊಳ್ಳಲಾಯಿತು. ರಾಣೆಬೆನ್ನೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಪ್ರಕಾಶಾನಂದಜಿ ಇವರ ಸಮ್ಮುಖದಲ್ಲಿ ಖ್ಯಾತ ವೈದ್ಯರಾದ ಡಾ. ಶಾಂತಾರಾಮ್ ಶೆಟ್ಟಿ, ಮುಖ್ಯಸ್ಥರು, ತೇಜಸ್ವಿನಿ ಆಸ್ಪತ್ರೆ ಮಂಗಳೂರು ಹಾಗೂ ಡಾ. ಕೆ ಭಾಸ್ಕರ ಶೆಟ್ಟಿ, ಮುಖ್ಯಸ್ಥರು, ಸಿಟಿ ಹಾಸ್ಪಿಟಲ್ ಮಂಗಳೂರು ಇವರುಗಳು ಜಂಟಿಯಾಗಿ ಶ್ರಮದಾನಕ್ಕೆ ಚಾಲನೆ ನೀಡಿದರು.

ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ ಮಾರ್ಗದರ್ಶನದಲ್ಲಿ ಮೊದಲು ಸ್ವಚ್ಛತೆಗೆ ಯೋಜನೆ ರೂಪಿಸಿಕೊಳ್ಳಲಾಯಿತು. ತೇಜಸ್ವಿನಿ ನರ್ಸಿಂಗ್ ಹಾಗೂ ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿಗಳು ಡಾ. ಶಾಂತಾರಮ್ ಶೆಟ್ಟಿ ನೇತೃತ್ವದಲ್ಲಿ ಕದ್ರಿ ದ್ವಾರದಿಂದ ಸಿಟಿ ಹಾಸ್ಪಿಟಲ್ ರಸ್ತೆ, ತೇಜಸ್ವಿನಿ ಆಸ್ಪತ್ರೆಯ ಮುಂಭಾಗ ಹಾಗೂ ಪುಟ್‌ಪಾಥ್‌ಗಳನ್ನು ಗುಡಿಸಿ, ಸ್ವಚ್ಛಗೊಳಿಸಿದರು. ಐ.ಎ.ಎಂ ವೈದ್ಯರುಗಳು ಕದ್ರಿ ವೃತ್ತದಿಂದ ಶಿವಭಾಗ್ ತೆರಳುವ ಮಾರ್ಗಗಳನ್ನು ಶುಚಿಗೊಳಿಸಿದರು. ಸಿಟಿ ಆಸ್ಪತ್ರೆ ಫಿಸಿಯೋಥೆರಪಿ ಕಾಲೇಜಿನ ವಿದ್ಯಾರ್ಥಿಗಳು ವಿಠಲದಾಸ್ ಪ್ರಭು ಮಾರ್ಗದರ್ಶನದಲ್ಲಿ ಕದ್ರಿ ದೇವಸ್ಥಾನದತ್ತ ಹೋಗುವ ರಸ್ತೆಯನ್ನು ಸ್ವಚ್ಚಗೊಳಿಸಿದರು. ಸ್ವಚ್ಛ ಮಂಗಳೂರು ಕಾರ್ಯಕರ್ತರು ಕದ್ರಿ ವೃತ್ತದ ಸುತ್ತಮುತ್ತ ಶುಚಿಗೊಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಪ್ರದೀಪ ಕುಮಾರ್ ಕಲ್ಕೂರ ರಾಣೆಬೆನ್ನೂರಿನ ಡಾ. ಚಂದಶೇಖರ್ ಕೇಲಗಾರ್, ಸೋಮಶೇಖರ್ ಮುಂಡರಗಿ, ಕಲಾ ದೀಪಕ್, ಗುರುದತ್ತ ಶೆಣೈ, ವಾಸಂತಿ ನಾಯಕ್, ಪ್ರೋ. ಶೇಷಪ್ಪ, ಮೊಹಬೂಬ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *