Header Ads
Header Ads
Breaking News

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನ

ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ 35ನೇ ಶ್ರಮದಾನವನ್ನು ನಗರದ ಹೊರವಲಯದ ಯಕ್ಕೂರಿನಲ್ಲಿ ಆಯೋಜನೆ ಮಾಡಲಾಗಿತ್ತು.ಜಿತಕಾಮಾನಂದಜಿ ಮಹರಾಜ್ ಸಮಕ್ಷಮದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪೂರ್ವ ನಿರ್ದೇಶಕರಾದ ದೇವಕಿ ಮುತ್ತುಕೃಷ್ಣನ್, ಅವರು ಶ್ರಮದಾನಕ್ಕೆ ಚಾಲನೆ ನೀಡಿದರು.ದೇವಕಿ ಮುತ್ತುಕೃಷ್ಣನ್ ಮಾತನಾಡಿ ಸ್ವಚ್ಛ ಮಂಗಳೂರು ಅಭಿಯಾನದಲ್ಲಿ ಸ್ವಚ್ಛ ಮನಸ್ಸು ಎಂಬ ಕಾರ್ಯಕ್ರಮಗಳು ನಡೆಯುತ್ತಿರುವುದು ಅತ್ಯಂತ ಶ್ರೇಷ್ಠ ಕಾರ್ಯ.

ಮನಸ್ಸುಗಳು ಹಸನಾದರೆ ನಮ್ಮ ಪರಿಸರ ಸಹಜವಾಗಿಯೇ ಸ್ವಚ್ಛವಾಗುತ್ತದೆ. ಮಳೆಗಾಳಿಯನ್ನೂ ಲೆಕ್ಕಿಸದೇ ಮಾಡುವ ಈ ನಿಸ್ವಾರ್ಥ ಕಾರ್ಯ ಅಭಿನಂದನೀಯ ಮತ್ತು ಅನುಕರಣೀಯ ಎಂದು ಹೇಳಿ ಶುಭಹಾರೈಸಿದರುಯಕ್ಕೂರ್ ಜಂಕ್ಷನ್ ನಲ್ಲಿ ಸ್ಥಳಿಯರ ಸಹಕಾರದಿಂದ ನೂತನವಾಗಿ ಬಸ್ ತಂಗುದಾನವನ್ನು ನಿರ್ಮಿಸಲಾಗಿದೆ.

 ಮಳೆಗಾಲದಲ್ಲಿ ಹೆಚ್ಚು ಉಪಯುಕ್ತವಾಗುವ ಈ ಬಸ್ ನಿಲ್ದಾಣವನ್ನು ಕೇವಲ ಐದೇ ದಿನಗಳಲ್ಲಿ ಕಾರ್ಯಕರ್ತರು ಮಳೆಗಾಳಿಯನ್ನೂ ಲೆಕ್ಕಿಸದೇ ಶ್ರಮವಹಿಸಿ ನಿರ್ಮಿಸಿದ್ದಾರೆ. ಮೇಲ್ಚಾವಣಿ, ಸ್ವತಂತ್ರ ಆಸನ ವ್ಯವಸ್ಥೆ, ಕಾಂಕ್ರೀಟ್ ನೆಲಹಾಸು, ಸಾಮಾಜಿಕ ಸಂದೇಶವುಳ್ಳ ಫಲಕಗಳನ್ನು ಈ ತಂಗುದಾಣವು ಒಳಗೊಂಡಿದೆ.

 

Related posts

Leave a Reply