Header Ads
Header Ads
Breaking News

ರಾಮನ ಹೆಸರಿನಲ್ಲಿ ಜನರನ್ನು ಮೋಸ ಮಾಡಲು ಹೊರಟಿದೆ ಬಿಜೆಪಿ : ರಮಾನಾಥ ರೈ ಹೇಳಿಕೆ

ವಿಟ್ಲ: ಬಿಜೆಪಿಯವರು ರಾಮನ ಹೆಸರಿನಲ್ಲಿ ಜನರನ್ನು ಮತ್ತೆ ಮೋಸ ಮಾಡಲು ಹೊರಟಿದ್ದಾರೆ. ಶಬರಿಮಲೆ ಬಗ್ಗೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ್ದು, ಈ ಆದೇಶದ ಹಿಂದೆ ಬಿಜೆಪಿಯವರ ಷಡ್ಯಂತ್ರ ಅಡಗಿದೆ ಅನುಮಾನ ಕಾಡುತ್ತಿದೆ. ಶಬರಿಮಲೆ ವಿಚಾರವನ್ನು ಬಿಜೆಪಿಯವರು ರಾಜಕೀಯ ಅಸ್ತ್ರವನ್ನಾಗಿ ಉಪಯೋಗಿಸುತ್ತಿದ್ದಾರೆ. ಬಿಜೆಪಿಯವರಿಗೆ ನಿಜವಾಗಿ ದೇವರ ಮೇಲೆ ಭಕ್ತಿಯಿಲ್ಲ. ಬಿಜೆಪಿಯ ಎಷ್ಟು ಮಂದಿ ಶಬರಿಮಲೆಗೆ ಹೋಗಿದ್ದಾರೇ? ಕಲ್ಲಡ್ಕ ಪ್ರಭಾಕರ್ ಭಟ್ ಇದುವರೆಗೂ ಶಬರಿಮಲೆಗೆ ಹೋಗಿಲ್ಲ? ಎಂದು ಮಾಜಿ ಸಚಿವ ರಮಾನಾಥ ರೈ ಅವರು ಪ್ರಶ್ನಿಸಿದರು. 

ಅವರು ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ ಪೂರ್ಣಗೊಳಿಸಿ – ಜನರ ಜೀವ ಉಳಿಸಿ ಕಾಲ್ನಡಿಗೆ ಜಾಥಾದಲ್ಲಿ ಮಾಣಿ ಜಂಕ್ಷನ್ ತಲುಪಿ, ಏರ್ಪಡಿಸಿದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಮಾನಾಥ ರೈ ಸನಾತನ ಹಿಂದೂ ಧರ್ಮದ ಭಕ್ತನಾಗಿದ್ದೇನೆ. ನಾನು 18 ಬಾರಿ ಶಬರಿಮಲೆಗೆ ಹೋಗಿದ್ದೇನೆ. ವಿದ್ಯಾರ್ಥಿ ಜೀವನದಿಂದಲೇ ಶಬರಿಮಲೆಗೆ ಹೋಗಿದ್ದೇನೆ. ಬಿಜೆಪಿಯವರು ದೇವರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿಯದು ಕೀಳು ಮಟ್ಟದ ರಾಜಕೀಯವಾಗಿದೆ. ಅವರಿಗೆ ಅಭಿವೃದ್ಧಿ ಮುಖ್ಯವಲ್ಲ. ಮತೀಯ ಭಾವನೆಗಳನ್ನು ಕೆರಳಿಸುವುದು ಮುಖ್ಯವಾಗಿದೆ. ಜನರ ನಡುವೆ ಜಗಳ ಎಬ್ಬಿಸಿ ಅದರ ಮೂಲಕ ಓಟು ಬ್ಯಾಂಕ್ ಮಾಡುತ್ತಿದೆ ಎಂದು ಅವರು ಕಿಡಿಕಾರಿದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಬಿಜೆಪಿಗೆ ಒಡೆದು ಆಳುವ ನೀತಿ ಗೊತ್ತು. ಆದರೆ ಅಭಿವೃದ್ಧಿ ಗೊತ್ತಿಲ್ಲ. ಜಿಲ್ಲೆಯ ರಸ್ತೆ, ನೀರು ಇತರ ಸೌಲಭ್ಯಕ್ಕೆ ಬಿಜೆಪಿ ಕೊಡುಗೆ ಏನೂ ಇಲ್ಲ ಎಂದು ಹೇಳಿದರು.

ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕೆಪಿಸಿಸಿ ಸದಸ್ಯ ಡಾ. ರಘು, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹೇಮನಾಥ ಶೆಟ್ಟಿ, ವಕ್ಪ್ ಅಧ್ಯಕ್ಷ ಕಣಚೂರು ಮೋಣು, ಜೆಡಿಎಸ್ ಮುಖಂಡ ಎಂ.ಬಿ.ಸದಾಶಿವ, ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply