Header Ads
Header Ads
Breaking News

ರಾಮ ಮಂದಿರಕ್ಕೆ ಪ್ರಧಾನಿ ಶಿಲಾನ್ಯಾಸ ಮಾಡಲಿ : ಉಡುಪಿಯಲ್ಲಿ ಯೋಗ ಗುರು ಬಾಬಾ ರಾಮ್ ದೇವ್ ಅಭಿಪ್ರಾಯ

ರಾಮನವಮಿ ದಿನವೇ ರಾಮಮಂದಿರಕ್ಕೆ ಶಿಲಾನ್ಯಾಸವಾಗಲಿ. ಪ್ರಧಾನಿಯವರೇ ಶಿಲಾನ್ಯಾಸ ಮಾಡಲಿ ಅಂತ ಯೋಗ ಗುರು ಬಾಬಾ ರಾಮ್ ದೇವ್ ಆಶಯ ವ್ಯಕ್ತಪಡಿಸಿದ್ದಾರೆ. ಐದು ದಿನ ಉಡುಪಿಯಲ್ಲಿ ಯೋಗ ಮತ್ತು ಧ್ಯಾನ ಶಿಬಿರ ನಡೆಸಿಕೊಡಲು ಬಾಬಾ ರಾಮ್ ದೇವ್ ಉಡುಪಿಗೆ ಬಂದಿದ್ದು ಉಡುಪಿಯ ಕೃಷ್ಣನ ದರ್ಶನಕ್ಕೂ ಮೊದಲು ಸುದ್ದಿಗೋಷ್ಠಿ ನಡೆಸಿದರು. ಅಯೋದ್ಯೆ ವಿಚಾರವಾಗಿ ಮಾತನಾಡಿದ ಅವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಪೇಜಾವರ ಶ್ರೀಗಳಂತಹಾ ಹಿರಿಯರ ಕನಸಾಗಿದೆ. ದೇಶದ ಅನೇಕ ಮಹಾಪುರುಷರ ಆಂದೋಲನದ ಫಲವಾಗಿದೆ. ಅಯೋಧ್ಯೆ ಕೇವಲ ರಾಮಮಂದಿರ ಮಾತ್ರವಲ್ಲ, ವೈದಿಕ ಜ್ಞಾನ ಪರಂಪರೆ ಪ್ರತೀಕವಾಗಲಿ. ವ್ಯಾಟಿಕನ್, ಮೆಕ್ಕಾದ ಥರ ರಾಮಮಂದಿರ ರೂಪುಗೊಳ್ಳಬೇಕು. ಹಿಂದೂಗಳ ಮಹಾ ತೀರ್ಥಕ್ಷೇತ್ರವಾಗಲಿ ಅನ್ನೋದು ನನ್ನ ಬಯಕೆ. ಅಯೋಧ್ಯೆ ಜ್ಞಾನತೀರ್ಥವಾಗಲಿ, ವಿದ್ಯಾಪರಂಪರೆಯ ಪ್ರತೀಕವಾಗಲಿ. ರಾಮನವಮಿ ದಿನವೇ ರಾಮಮಂದಿರಕ್ಕೆ ಶಿಲಾನ್ಯಾಸವಾಗಲಿ. ಪ್ರಧಾನಿಯವರೇ ಶಿಲಾನ್ಯಾಸ ಮಾಡಲಿ ಎಂದ ಅವರು ಸರ್ಕಾರವೇ ನೇರವಾಗಿ ರಾಮಮಂದಿರ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಆದರೆ ಪ್ರಧಾನಿ ಶಿಲಾನ್ಯಾಸ ಮಾಡಲು ಅಡ್ಡಿಯಿಲ್ಲ ಎಂದರು.

 

Related posts

Leave a Reply

Your email address will not be published. Required fields are marked *