Header Ads
Header Ads
Breaking News

ರಾಮ ಮಂದಿರ ನಿರ್ಮಾಣಕ್ಕೆ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ:ಗೋ ಮಧುಸೂಧನ್ ವಿವಾದಾತ್ಮಕ ಹೇಳಿಕೆ

ಅಯೋಧ್ಯೆಯ ಬಳಿಕ ಮಥುರಾ ಮತ್ತು ಕಾಶಿಗೆ ಬಿಡುಗಡೆ ಎಂದು ಬಿಜೆಪಿ ನಾಯಕ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಗೋ ಮಧುಸೂದನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ಶ್ರೀ ರಾಮನ ಭವ್ಯ ಮಂದಿರ ನಿರ್ಮಾಣಕ್ಕೆ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ. ಇನ್ನು ನಮ್ಮ ಮುಂದಿನ ಗುರಿ ಮಥುರಾದ ಕೃಷ್ಣ ಹಾಗೂ ಕಾಶಿಯ ವಿಶ್ವನಾಥನ ಬಿಡುಗಡೆಯಾಗಿದೆ ಎಂದು ಗೋ ಮಧುಸೂದನ್ ಉಡುಪಿಯಲ್ಲಿ ಹೇಳಿದ್ದಾರೆ. ಹಿಂದುಗಳ ಬಹುಕಾಲದ ನಿರೀಕ್ಷೆಯಾದ ಅಯೋಧ್ಯೆಯಲ್ಲಿ ರಾಮನಿಗೆ ಭವ್ಯ ಮಂದಿರ ಕಟ್ಟಲು ಎಲ್ಲಾ ವ್ಯವಸ್ಥೆ ಪೂರ್ಣಗೊಳ್ಳುವ ಕಾಲಘಟ್ಟದಲ್ಲಿ ನಾವಿದ್ದೇವೆ.

ರಾಮಜನ್ಮಭೂಮಿಗೆ ಈಗಾಗಲೇ ಮುಕ್ತಿ ಸಿಕ್ಕಿದೆ. ದೇಶದ ಸಾಧುಸಂತರು, ಜನಸಾಮಾನ್ಯರು ಅಲ್ಲಿ ಮಂದಿರ ನಿರ್ಮಾಣದ ಸಂಕಲ್ಪತೊಟ್ಟಿದ್ದಾರೆ. ಇದಕ್ಕೆ ಅವಕಾಶ ಮಾಡಿಕೊಡುವಂತೆಪ್ರಧಾನಿಗೆ ಮನವಿ ಮಾಡಲಾಗಿದೆ.ಮೊದಲು ರಾಮಮಂದಿರ, ಬಳಿಕ ಚುನಾವಣೆ’ ಎಂದು ಸ್ಪಷ್ಟವಾಗಿತಿಳಿಸಲಾಗಿದೆ ಎಂದು ಗೋ ಮಧುಸೂದನ್ತಿಳಿಸಿದರು.ಮುಂದೆ ನಾವು ಕೃಷ್ಣನ ಜನ್ಮಸ್ಥಾನಕ್ಕೆ ಹಾಗೂಕಾಶಿಗೆ ಜೈ ಕೂಗುತ್ತೇವೆ. ಈ ಮೂರು ದೇವಸ್ಥಾನಗಳುನಮಗೆ ಬೇಕೇಬೇಕು. ರಾಮ-ಕೃಷ್ಣರು ನಮಗೆ ಕೇವಲರಾಜರಲ್ಲ, ದೇವರು, ಭಗವಂತ, ಸೃಷ್ಟಿಕರ್ತ.

ಅವರು ನಮ್ಮ ಹೃದಯದಲ್ಲಿ ನೆಲೆಸಿದ್ದಾರೆ ಎಂದರು. ಅಯೋಧ್ಯೆಯಲ್ಲಿ ಭವ್ಯವಾದ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸುವ ಜೊತೆ ಜೊತೆಗೆ ಶ್ರೀಕೃಷ್ಣ ಹಾಗೂ ಕಾಶಿ ವಿಶ್ವನಾಥರ ಬಿಡುಗಡೆ ನಮ್ಮ ಮುಂದಿನ ಗುರಿ. ಕೃಷ್ಣನ ಜನ್ಮಸ್ಥಾನದಲ್ಲಿರುವ ಔರಂಗಜೇಬನ ಮಸೀದಿ ಹಾಗೂ ಕಾಶಿ ವಿಶ್ವನಾಥನ ಜ್ಯೋತಿರ್ಲಿಂಗದಲ್ಲಿರುವ ಮಸೀದಿ ಎರಡೂ ಹೋಗಬೇಕಾಗಿದೆ ಎಂದು ಹೇಳಿದ್ದಾರೆ.

Related posts

Leave a Reply