Breaking News

ರಾಷ್ಟಪತಿ ಚುನಾವಣೆ, ಮೊದಲ ದಿನ ಆರು ಜನರಿಂದ ನಾಮಪತ್ರ ಸಲ್ಲಿಕೆ

ರಾಷ್ಟ್ರಪತಿ ಹುದ್ದೆಗೆ ಜುಲೈ ೧೭ರಂದು ನಡೆಯಲಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೊದಲ ದಿನವಾದ ಬುಧವಾರ ಮುಂಬೈನ ದಂಪತಿ ಸೇರಿದಂತೆ ಒಟ್ಟು ಆರು ಅಬ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ತಮಿಳುನಾಡಿನ ಕೆ. ಪದ್ಮರಾಜನ್, ಮಧ್ಯಪ್ರದೇಶದ ಆನಂದ ಸಿಂಗ್ ಕುಶ್ವಾಹ, ತೆಲಂಗಾಣದ ಎ. ಬಾಲರಾಜ್, ಮುಂಬೈನ ಸಾಯಿರಾಬಾನು ಮತ್ತು ಮೊಹಮ್ಮದ್ ಪಟೇಲ್ ಅಬ್ದುಲ್ ಹಮೀದ್ ದಂಪತಿ ಹಾಗೂ ಪುಣೆಯ ಕೊಂಡೇಕರ್ ವಿಜಯಪ್ರಕಾಶ್ ನಾಮಪತ್ರ ಸಲ್ಲಿಸಿದವರು.
ಅನುಮೋದಕರ ಸಹಿ ಇಲ್ಲದ ಕಾರಣ ಇವರೆಲ್ಲರ ನಾಮಪತ್ರಗಳೂ ತಿರಸ್ಕೃತವಾಗುವ ಸಾಧ್ಯತೆ ಹೆಚ್ಚು. ಅಭ್ಯರ್ಥಿಗಳ ನಾಮಪತ್ರಕ್ಕೆ ೫೦ ಸದಸ್ಯರು ಸೂಚಕರಾಗಿ ಇನ್ನೂ ೫೦ ಸದಸ್ಯರು ಅನುಮೋದಕರಾಗಿ ಸಹಿ ಹಾಕುವುದು ಕಡ್ಡಾಯ. ಲೋಕಸಭೆ, ರಾಜ್ಯಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಆಯ್ಕೆಯಾದ ಸದಸ್ಯರು ರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಹಕ್ಕು ಹೊಂದಿದ್ದಾರೆ.

Related posts

Leave a Reply