Header Ads
Header Ads
Header Ads
Breaking News

ರಾಷ್ಟ್ರಕವಿ ಕುವೆಂಪು ಅವರ 113 ನೇ ಹುಟ್ಟುಹಬ್ಬ ಹಿನ್ನೆಲೆ ಕುವೆಂಪು ಜನ್ಮದಿನಕ್ಕೆ ಗೌರವ ಸೂಚಿಸಿದ ಗೂಗಲ್

ಕನ್ನಡ ಸಾಹಿತ್ಯ ಕ್ಷೇತ್ರದ ಮುಕುಟಮಣಿಯಾಗಿದ್ದ ರಾಷ್ಟ್ರಕವಿ ಕುವೆಂಪು ಅವರ 113 ನೇ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಜಗತ್ತಿನ ಪ್ರಸಿದ್ಧ ಅಂತರ್ಜಾಲ ಜಾಲತಾಣ ಗೂಗಲ್ ಗೌರವ ಸೂಚಿಸಿದೆ.

ಗೂಗಲ್ ಡೂಡಲ್ ತನ್ನ ಮುಖಪುಟದಲ್ಲಿ ಕುವೆಂಪು ಅವರ ಭಾವಚಿತ್ರವನ್ನ ಭಿತ್ತರಿಸುವ ಮೂಲಕ ರಸ‌ಋಷಿಗೆ ನಮನ ಸಲ್ಲಿಸಿದೆ. ಬಿಳಿ ಪಂಚೆ ಮತ್ತು ಜುಬ್ಬದಲ್ಲಿ ಕುವೆಂಪು ಕಂಗೊಳಿಸುತ್ತಿದ್ದು, ಪ್ರಕೃತಿಯ ಮಡಿಲಲ್ಲಿ ಬಂಡೆ ಮೇಲೆ ಕುಳಿತಿರೋ ಭಾವಚಿತ್ರ ಗೂಗಲ್ ಮುಖಪುಟದಲ್ಲಿ ರಾರಾಜಿಸುತ್ತಿದೆ.

ಇನ್ನು ಕುವೆಂಪು ಅವರು ನಾಟಕ, ವಿಮರ್ಶೆ, ಪ್ರೇಮಗೀತೆ, ಕಾದಂಬರಿ, ಕಾವ್ಯ, ವಿಮರ್ಶಾತ್ಮಕ ಪ್ರಬಂಧ, ಮಕ್ಕಳ ನಾಟಕ, ಸಾನೆಟ್ಟುಗಳು, ಮಹಾಕಾವ್ಯ ಹೀಗೆ ವಿವಿಧ ಪ್ರಕಾರಗಳಲ್ಲಿ ಸೇವೆ ಸಲ್ಲಿಸಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಉತ್ತುಂಗಕ್ಕೆ ಕೊಂಡೊಯ್ದವರಲ್ಲಿ ಪ್ರಮುಖರಾಗಿದ್ದಾರೆ.

ಕನ್ನಡಕ್ಕೆ ತಮ್ಮ ‘ಶ್ರೀ ರಾಮಾಯಣ ದರ್ಶನಂ’ ಕೃತಿಗೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದು ಕೊಟ್ಟ ಹೆಗ್ಗಳಿಕೆ ಅವರದ್ದಾಗಿದೆ. ಅಂತಹ ದಿವ್ಯಚೇತನಕ್ಕೆ ಅವರ ಹುಟ್ಟುಹಬ್ಬದ ಈ ಸಂದರ್ಭದಲ್ಲಿ ಗೂಗಲ್ ಗೌರವ ಸೂಚಿಸಿರುವುದಕ್ಕೆ ಕನ್ನಡಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Related posts

Leave a Reply