Header Ads
Breaking News

ರಾಷ್ಟ್ರಪಕ್ಷಿ ನವಿಲಿನ ಕಳೇಬರದ ಅಂತ್ಯಸಂಸ್ಕಾರ

ರಾಷ್ಟ್ರಪಕ್ಷಿ ನವಿಲಿನ ಕಳೇಬರದ ಅಂತ್ಯಸಂಸ್ಕಾರವನ್ನು ಅಂತಿಮ ಗೌರವದೊಂದಿಗೆ ನಾಗರಿಕ ಸಮಿತಿಯ ಕಾರ್ಯಕರ್ತರು, ಅರಣ್ಯ ವಿಕ್ಷಕ ಪರಶುರಾಮ ಮೇಟಿ ಅವರ ಸಮಕ್ಷಮದಲ್ಲಿ ಆದಿ ಉಡುಪಿ ಅರಣ್ಯ ಇಲಾಖೆಯ ಪ್ರಾಣಿ ದಹನ ಭೂಮಿಯಲ್ಲಿ ನಡೆಸಿದರು.ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿಯ ವಿಭಾಜಕದಲ್ಲಿ ಹೆಣ್ಣು ನವಿಲಿನ ಕಳೇಬರವು ಸೋಮವಾರ ಬೆಳಗಿನ ಜಾವದಲ್ಲಿ ಕಂಡು ಬಂದಿದೆ. ವಿಷಯ ತಿಳಿದ ಸ್ಥಳಿಯ ಸಾಮಾಜಿಕ ಕಾರ್ಯಕರ್ತರು ನಾಗರಿಕ ಸಮಿತಿಯ ಸಹಾಯವಾಣಿಗೆ ಕರೆಮಾಡಿ ತಿಳಿಸಿದ್ದಾರೆ. ಸ್ಪಂದಿಸಿದ ನಾಗರಿಕ ಸಮಿತಿಯ ಕಾರ್ಯಕರ್ತರು ಕಳೇಬರವನ್ನು ಪಶುವೈದ್ಯರಲ್ಲಿ ಪರೀಕ್ಷೆಗೆ ಒಳಪಡಿಸಿದ್ದಾರೆ. ನವಿಲಿನ ದೇಹದ ಮೇಲೆ ಗಾಯಗಳು ಕಂಡು ಬಂದಿರುವುದರಿಂದ ರಸ್ತೆ ದಾಟುತ್ತಿರುವಾಗ ವಾಹನ ಅಪಘಾತದಿಂದ ನವಿಲು ಮೃತಪಟ್ಟಿರಬಹುದೆಂದು ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Related posts

Leave a Reply

Your email address will not be published. Required fields are marked *